Wednesday, June 3, 2026
Homeತಾಜಾ ಸುದ್ದಿಚಾಮರಾಜನಗರ: ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಸಾವು

ಚಾಮರಾಜನಗರ: ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಸಾವು

- Advertisement -
- Advertisement -

ಚಾಮರಾಜನಗರ: ನದಿ ನೀರಿನಲ್ಲಿ ಆಡವಾಡುತಿದ್ದಾಗ ನೀರಿನಲಿ ಮುಳುಗಿ ಇಬ್ಬರು ಮೃತಪಟ್ಟರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾವೇರಿ ನದಿಯಲ್ಲಿ ನಡೆದಿದೆ.


ಬೆಂಗಳೂರಿನ ಕೆರೆ ಬಡಾವಣೆಯ ಬಷೀರ್ ಎಂಬವರ ಪುತ್ರಿ ಹುದಾ ಶೇಖ್ (7), ಆಕೆಯ ಚಿಕ್ಕಮ್ಮ ಅಸ್ಮಾತಾಜ್ (34) ಮೃತರು. ಬಾಲಕಿ ಹುದಾ ಶೇಖ್ ನೀರಿನಲ್ಲಿ ಆಟವಾಡುತ್ತಿದ್ದಾಗ ಮುಳುಗಿದ್ದಳು, ಆಕೆಯನ್ನು ರಕ್ಷಿಸಲು ಹೋದ ಚಿಕ್ಕಮ್ಮಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.


ಬಷೀರ್ ಕುಟುಂಬದವರು ಸೇರಿದಂತೆ 10ಕ್ಕೂ ಹೆಚ್ಚು ಜನರು ಭಾನುವಾರ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಪ್ರವಾಸಿ ತಾಣ ಹಾಗೂ ದರ್ಗಾಕ್ಕೆ ಭೇಟಿ ನೀಡಿದ್ದರು.ನಂತರ ತಲಕಾಡಿಗೆ ತೆರಳಲೆಂದು ಬಂದಿದ್ದರು.ಮಧ್ಯಾಹ್ನದ ವೇಳೆ ಸತ್ತೇಗಾಲ ಸೇತುವೆ ಕೆಳಗೆ ಕಾವೇರಿ ನದಿ ನೀರಿನಲ್ಲಿ ಹುದಾಶೇಕ್, ಅಸ್ಮಾತಾಜ್
ಸೇರಿದಂತೆ ಮಹಿಳೆಯರು ಆಟವಾಡುತ್ತಿದ್ದರು. ಬಷೀರ್ ಸೇರಿದಂತೆ ಪುರುಷರು ಬೇರೆ ಕಡೆ ತೆರಳಿದ್ದರು. ನೀರಿನಲ್ಲಿ ಆಟ ಆಡುತ್ತಿದ್ದವೇಳೆ ಬಾಲಕಿ ಹುದಾಶೇಕ್ ಕಾಲು ಜಾರಿ ಬಿದ್ದು ಕೊಚ್ಚಿ ಹೋಗುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ಚಿಕ್ಕಮ್ಮ ಅಸ್ಮಾತಾಜ್ ಬಾಲಕಿಯನ್ನು + ರಕ್ಷಿಸಲು ಹೋಗಿ ತಾನು ನೀರು ಪಾಲಾಗಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ಪೇದೆಗಳು ಭೇಟಿ ನೀಡಿ ಮೃತ ದೇಹಗಳನ್ನು ಹೊರ ತೆಗೆಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕ

- Advertisement -

Latest News

error: Content is protected !!