Thursday, June 4, 2026
Homeತಾಜಾ ಸುದ್ದಿಯುವಕನೋರ್ವನಿಗೆ ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ ತಂಡ

ಯುವಕನೋರ್ವನಿಗೆ ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ ತಂಡ

- Advertisement -
- Advertisement -

ಬೆಂಗಳೂರು: ಬೆಂಗಳೂರಿನ ಬಾರ್ ವೊಂದರಲ್ಲಿ ಗ್ಯಾಂಗ್‍ವೊಂದು ಜುಟ್ಟು ಅಂದಿದ್ದಕ್ಕೆ ಸಿನಿಮಾ ಸ್ಟೈಲ್‍ನಲ್ಲಿ ಮತ್ತೊಂದು ತಂಡವು ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಹಲ್ಲೆಗೈದ ಘಟನೆ ನಗರದ ರಾಮಮೂರ್ತಿ ನಗರ ಟಿಸಿ ಪಾಳ್ಯದಲ್ಲಿ ನಡೆದಿದೆ.

ಹಲ್ಲೆಗೊಳಗಾದ  ವ್ಯಕ್ತಿಗಳನ್ನು ವಿನಯ್, ಬಸವರಾಜು, ಗುರು ಎಂದು ಗುರುತಿಸಲಾಗಿದೆ. ತರುಣ್, ರಾಹುಲ್, ವಿಕ್ಕಿ, ಆ್ಯಂಡ್ ಗ್ಯಾಂಗ್‍ನಿಂದ ಹಲ್ಲೆ ನಡೆದಿದೆ. ಯುವಕರು ಮದ್ಯಪಾನ ಮಾಡಲು ಬಾರ್‍ಗೆ ತೆರಳಿದ್ದರು. ಇದೇ ವೇಳೆ ತರುಣ್ ಗ್ಯಾಂಗ್ ಅಲ್ಲಿಗೆ ಬಂದಿತ್ತು. ಗ್ಯಾಂಗ್‍ನಲ್ಲಿ ರಾಹುಲ್ ಜುಟ್ಟು ಬಿಟ್ಟಿದ್ದನ್ನು ನೋಡಿ ಯುವಕರು ನಕ್ಕಿದ್ದಾರೆ. ಇದೇ ವಿಚಾರಕ್ಕೆ ಎರಡು ಗ್ಯಾಂಗ್‍ಗಳ ನಡುವೆ ಮಾರಮಾರಿ ನಡೆದು ಗಲಾಟೆ ಶುರುವಾಗಿದೆ.

ನಂತರದಲ್ಲಿ ಮೂವರು ಯುವಕರ ಮೇಲೆ ತರುಣ್ ಆ್ಯಂಡ್ ಗ್ಯಾಂಗ್ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದ್ದು, ಗಾಯಗೊಂಡ ಯುವಕರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ತರುಣ್‍ನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!