Friday, June 5, 2026
Homeಕರಾವಳಿಬೆಳ್ತಂಗಡಿ ಮೊಬೈಲ್ ಶಾಪ್ ಹಾಗೂ ಹೊಟೇಲ್ ನುಗ್ಗಿದ ಕಳ್ಳರು‌: ಮೊಬೈಲ್ ಫೋನ್ ಹಾಗೂ ನಗದು ಕಳ್ಳತನ

ಬೆಳ್ತಂಗಡಿ ಮೊಬೈಲ್ ಶಾಪ್ ಹಾಗೂ ಹೊಟೇಲ್ ನುಗ್ಗಿದ ಕಳ್ಳರು‌: ಮೊಬೈಲ್ ಫೋನ್ ಹಾಗೂ ನಗದು ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ಕಳ್ಳರ ಕೈಚಳಕ ಮತ್ತೆ ಮುಂದುವರೆದಿದೆ. ಬೆಳ್ತಂಗಡಿಯ ಮೂರುಮಾರ್ಗದ ಬಳಿ ಎರಡು ಅಂಗಡಿಗಳಲ್ಲಿ ಕಳ್ಳರು ಕಳ್ಳತನವೆಸಗಿದ್ದಾರೆ.

ಬೆಳ್ತಂಗಡಿಯ ಮೂರು ಮಾರ್ಗದಲ್ಲಿರುವ ದಿವಾಕರ್ ಪ್ರಭು ಅವರ ಮಾಲೀಕತ್ವದ  ಗಣೇಶ್ ಹೊಟೇಲ್ ಮತ್ತು ಚೇತನ್ ಮಾಲೀಕತ್ವದ ನಕ್ಷತ್ರ ಮೊಬೈಲ್ ಶಾಪ್ ಗೆ ಕಳ್ಳರು ನುಗ್ಗಿದ್ದಾರೆ. ಹಂಚು ತೆಗೆದು ನಕ್ಷತ್ರ ಮೊಬೈಲ್ ಶಾಪ್ ನ ಒಳನುಗ್ಗಿದ‌ ಕಳ್ಳರು ವಿವೋ ಕಂಪನಿಯ 18 ಸಾವಿರ ಮೌಲ್ಯದ ಒಂದು ಮೊಬೈಲ್ ಹಾಗೂ ಹದಿನಾರು ಸಾವಿರ ಮೌಲ್ಯದ ಒಂದು ಮೊಬೈಲ್ ಸೇರಿ ಎರಡು ಮೊಬೈಲ್ ಫೋನ್ ಗಳು ಮತ್ತು ರಿಪೇರಿ ಮಾಡಿ ಇಟ್ಟಿದ್ದ ಎರಡು ಮೊಬೈಲ್ ಫೋನ್ ಕಳ್ಳತನ ಮಾಡಿದ್ದಾರೆ‌.

ಇನ್ನು ಗಣೇಶ್ ಹೊಟೇಲ್ ನಲ್ಲಿರುವ ಸಿಸಿಟಿವಿ ಡಿವಿಆರ್ ಮತ್ತು ಕ್ಯಾಸ್ ನಲ್ಲಿದ್ದ 3,500 ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ.  ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!