Monday, April 29, 2024
HomeWorld3.37 ಲಕ್ಷ ಕೋಟಿ ರೂಪಾಯಿಗೆ ಟ್ವಿಟ್ಟರ್ ಖರೀದಿಸಿದ ಎಲಾನ್ ಮಸ್ಕ್

3.37 ಲಕ್ಷ ಕೋಟಿ ರೂಪಾಯಿಗೆ ಟ್ವಿಟ್ಟರ್ ಖರೀದಿಸಿದ ಎಲಾನ್ ಮಸ್ಕ್

spot_img
- Advertisement -
- Advertisement -

ವಿಶ್ವದ ನಂಬರ್ ಒನ್ ಶ್ರೀಮಂತ ಹಾಗೂ ಉದ್ಯಮ ಸಾಹಸಿ ಎಲಾನ್ ಮಸ್ಕ್ ಅವರು ತಾವು ಹೇಳಿದಂತೆ ಟ್ವಿಟ್ಟರ್ ಎಂಬ ಜನಪ್ರಿಯ ಸೋಷಿಯಲ್ ಮೀಡಿಯಾ ಕಂಪನಿಯನ್ನು ಖರೀದಿಸಿದ್ದಾರೆ. ಸುಮಾರು 44 ಬಿಲಿಯನ್ ಡಾಲರ್, ಅಂದರೆ 3.37 ಲಕ್ಷ ಕೋಟಿ ರೂಪಾಯಿಗೆ ಟ್ವಿಟ್ಟರ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ. ಟ್ವಿಟ್ಟರ್‌ನ ಪ್ರತೀ ಷೇರನ್ನೂ 54.20 ಡಾಲರ್ (ಸುಮಾರು 4,149 ರೂ) ಬೆಲೆಯಂತೆ ಕೊಳ್ಳಲಾಗಿದೆ.

ಟೆಸ್ಲಾ, ಸ್ಪೇಸ್‌ಎಕ್ಸ್ ಮೊದಲಾದ ಕಂಪನಿಗಳ ಮಾಲೀಕರಾದ ಎಲಾನ್ ಮಸ್ಕ್ ಅವರು ಏಪ್ರಿಲ್ 14ರಂದೇ ತಾನು ಟ್ವಿಟ್ಟರ್ ಖರೀದಿಸುವುದಾಗಿ ಹೇಳಿ 43 ಬಿಲಿಯನ್ ಡಾಲರ್ ಆಫರ್ ಮುಂದಿಟ್ಟಿದ್ದರು.

ಆದರೆ, ಟ್ವಿಟ್ಟರ್ ಆಡಳಿತ ಮಂಡಳಿಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಟ್ವಿಟ್ಟರ್ ಖರೀದಿಸಿಲು ತಾನು ಮಾಡಿರುವ ಹಣದ ವ್ಯವಸ್ಥೆಯ ವಿವರವನ್ನು ಮಸ್ಕ್ ಅಧಿಕೃತವಾಗಿ ಘೋಷಿಸಿದ ಬಳಿಕ ಟ್ವಿಟ್ಟರ್ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗಿತ್ತು ಎನ್ನಲಾಗಿದೆ.


ಖರೀದಿಗೂ ಮುನ್ನ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಪ್ರಮುಖ ಷೇರುದಾರರಾಗಿದ್ದರು. ಶೇ 9.2ರಷ್ಟು ಷೇರುಗಳನ್ನು ಅವರು ಹೊಂದಿದ್ದರು. ತನ್ನ ಪ್ರಸ್ತಾವಕ್ಕೆ ಟ್ವಿಟ್ಟರ್ ಸರಿಯಾಗಿ ಸ್ಪಂದಿಸದಿದ್ದಾಗ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಇತರ ಪ್ರಮುಖ ಷೇರುದಾರರನ್ನ ಖಾಸಗಿಯಾಗಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರೆನ್ನಲಾಗಿದೆ. ಒಂದು ವೇಳೆ, ಇದಕ್ಕೂ ಟ್ವಿಟ್ಟರ್ ಆಡಳಿತ ಮಂಡಳಿ ಬಗ್ಗದಿದ್ದರೆ ವಿವಿಧ ಷೇರುದಾರರ ಮೂಲಕ ಒತ್ತಡ ಹಾಕಿಸುವುದು ಮಸ್ಕ್ ಅವರ ತಂತ್ರವಾಗಿತ್ತೆನ್ನಲಾಗಿದೆ.

ಕುತೂಹಲ ಎಂದರೆ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಕಟು ಟೀಕಾಕಾರರಾಗಿದ್ದಾರೆ. ಟ್ವಿಟ್ಟರ್‌ ವೇದಿಕೆಯಲ್ಲಿ ಮುಕ್ತವಾದ ವಾಕ್‌ಸ್ವಾತಂತ್ರ್ಯ ಇಲ್ಲ ಎಂದು ಅವರು ಹಲವು ಬಾರಿ ಕುಟುಕಿದ್ದಾರೆ.

- Advertisement -
spot_img

Latest News

error: Content is protected !!