- Advertisement -
![]()
- Advertisement -
ಮೈಸೂರು: ಕಾರನ್ನು ಮರದಡಿ ನಿಲ್ಲಿಸುವ ವೇಳೆ ಏಕಾಏಕಿ ಮರದ ಬೃಹತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಒಂಟಿಕೊಪ್ಪಲು ಅಂಚೆ ಕಚೇರಿ ಎದುರು ಇರುವ ಲಾಯಲ್ ವರ್ಲ್ಡ್ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಮರದ ನೆರಳಿನಲ್ಲಿ ನಿಲ್ಲಿಸಿದ ಕ್ಷಣ ಮಾತ್ರದಲ್ಲಿ ಮರ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಬಹುತೇಕ ಜಖಂಗೊಂಡಿದ್ದು ಕಾರನಲ್ಲಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದಕ್ಕೂ ಮೊದಲು ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ಯುವಕರಿಬ್ಬರಿಗೆ ಮರದಲ್ಲಿ ಶಬ್ದ ಉಂಟಾಗುತ್ತಿರುವುದನ್ನು ಗಮನಕ್ಕೆ ಬಂದಿದೆ. ಪಕ್ಕಕ್ಕೆ ಸರಿಯುತ್ತಿದ್ದಂತೆ ಮರದ ಕೊಂಬೆ ಮುರಿದುಬಿದ್ದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಕಷ್ಟು ವೈರಲ್ ಆಗಿದೆ.
- Advertisement -


