Sunday, May 5, 2024
Homeತಾಜಾ ಸುದ್ದಿಕೇರಳ ದೇವಾಲಯಗಳಲ್ಲಿ ಆರ್.ಎಸ್.ಎಸ್. ಶಾಖೆ, ಕಾರ್ಯಕ್ರಮಗಳಿಗೆ ನಿಷೇಧ

ಕೇರಳ ದೇವಾಲಯಗಳಲ್ಲಿ ಆರ್.ಎಸ್.ಎಸ್. ಶಾಖೆ, ಕಾರ್ಯಕ್ರಮಗಳಿಗೆ ನಿಷೇಧ

spot_img
- Advertisement -
- Advertisement -

ಕೊಚ್ಚಿ: ರಾಜಕೀಯ ಉದ್ದೇಶಕ್ಕಾಗಿ ದೇವಾಲಯಗಳ ಆವರಣ ಬಳಕೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದ 1240 ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ತಿರುವಾಂಕೂರು ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್. ಮಾತ್ರವಲ್ಲ, ಯಾವುದೇ ಸಂಘಟನೆಯ, ರಾಜಕೀಯ ಪಕ್ಷಗಳ ಚಟುವಟಿಕೆ, ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ನಿಷೇಧ ಉಲ್ಲಂಘಿಸಿ ದೇವಾಲಯಗಳಲ್ಲಿ ಚಟುವಟಿಕೆ ನಡೆಯುತ್ತಿದ್ದರೆ ಅದನ್ನು ನಿಲ್ಲಿಸುವಂತೆ ದೇವಾಲಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಕೇರಳದ ಅನೇಕ ದೇವಾಲಯಗಳಲ್ಲಿ ಆರ್.ಎಸ್.ಎಸ್. ಶಾಖೆ, ಕಾರ್ಯಕ್ರಮಗಳು ನಡೆಯುತ್ತಿವೆ. ದೇವಾಲಯಗಳ ಸಿಬ್ಬಂದಿ ಇದನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ

ದೇವಾಲಯಗಳ ವ್ಯಾಪ್ತಿಯಲ್ಲಿ ಆರ್.ಎಸ್.ಎಸ್. ಚಟುವಟಿಕೆ ನಿಯಂತ್ರಿಸಲು ವಿಫಲವಾದಲ್ಲಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಎಚ್ಚರಿಕೆ ನೀಡಿದೆ.

- Advertisement -
spot_img

Latest News

error: Content is protected !!