Sunday, June 7, 2026
Homeಕ್ರೀಡೆಇಂದು ನಡೆಯಬೇಕಿದ್ದ ಭಾರತ ಶ್ರೀಲಂಕಾ ನಡುವಿನ 2ನೇ ದಿನದ ಟಿ20 ಪಂದ್ಯ ಮುಂದೂಡಿಕೆ

ಇಂದು ನಡೆಯಬೇಕಿದ್ದ ಭಾರತ ಶ್ರೀಲಂಕಾ ನಡುವಿನ 2ನೇ ದಿನದ ಟಿ20 ಪಂದ್ಯ ಮುಂದೂಡಿಕೆ

- Advertisement -
- Advertisement -

ಬೆಂಗಳೂರು : ಭಾರತ ಶ್ರೀಲಂಕಾ ನಡುವೆ ಇಂದು 2ನೇ ದಿನ ಟಿ20 ಪಂದ್ಯಾವಳಿ ನಡೆಯಬೇಕಿತ್ತು. ಆದರೆ ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಆಗಿರುವುದರಿಂದ ಇಂದಿನ 2ನೇ ದಿನದ ಟಿ20 ಪಂದ್ಯಾವಳಿಯನ್ನು ಮುಂದೂಡಲಾಗಿದೆ.

ಕೊರೋನಾ ಪಾಸಿಟಿವ್ ಪತ್ತೆ ಪರೀಕ್ಷೆಯಲ್ಲಿ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಇಂದು ನಿಗದಿಯಾಗಿದ್ದಂತ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಪಂದ್ಯವನ್ನು ಮುಂದೂಡಲಾಗಿದ್ದು, ಉಳಿದ ಪಂದ್ಯಾವಳಿಗಳನ್ನು ಆಟಗಾರರಿಗೆ ಕೊರೋನಾ ಪಾಸಿಟಿವ್ ಪತ್ತೆ ಪರೀಕ್ಷೆಯ ನಂತ್ರವೇ ನಿರ್ಧಾರವಾಗಲಿದೆ.

ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಉಳಿದ ಆಟಗಾರರ ವರದಿಗಳು ಬರುವವರೆಗೂ ಎರಡೂ ತಂಡಗಳನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿರೋದಾಗಿ ತಿಳಿಸಿವೆ. ಈ ಕಾರಣದಿಂದಾಗಿ ಇಂದಿನ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಪಂದ್ಯಾವಳಿಯನ್ನು ಮುಂದೂಡಲಾಗಿದೆ.

- Advertisement -

Latest News

error: Content is protected !!