Sunday, June 7, 2026
Homeಕರಾವಳಿಕಾಸರಗೋಡುಕಾಸರಗೋಡು:ಅಕ್ರಮ ಮದ್ಯ ಮಾರಾಟ,ಇಬ್ಬರ ಬಂಧನ; ಕಾರು, ಮದ್ಯ ವಶ

ಕಾಸರಗೋಡು:ಅಕ್ರಮ ಮದ್ಯ ಮಾರಾಟ,ಇಬ್ಬರ ಬಂಧನ; ಕಾರು, ಮದ್ಯ ವಶ

- Advertisement -
- Advertisement -

ಕಾಸರಗೋಡು:ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತ ಬೈಲ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರಿ ಪ್ರಮಾಣದ ಮದ್ಯವನ್ನು ಕಾಸರಗೋಡು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೂರಂಬೈಲ್‌ ನ ಸುಬ್ರಹ್ಮಣ್ಯ (23) ಮತ್ತು ಮೊಗ್ರಾಲ್ ನ ಮುಝಮ್ಮಿಲ್(24)‌ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದು, ಕರ್ನಾಟಕದಿಂದ ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ 36 ಬಾಕ್ಸ್ ಗಳಲ್ಲಿ 1728 ಪ್ಯಾಕೆಟ್ ಮದ್ಯವಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ

- Advertisement -

Latest News

error: Content is protected !!