Sunday, April 28, 2024
HomeWorldಟಿಕ್ ಟಾಕ್ ನಿಂದ ‘ಬುಕ್ ಟಾಕ್’ ಓದುಗರ ಗೀಳು ಹೆಚ್ಚಿಸುವ ಆ್ಯಪ್

ಟಿಕ್ ಟಾಕ್ ನಿಂದ ‘ಬುಕ್ ಟಾಕ್’ ಓದುಗರ ಗೀಳು ಹೆಚ್ಚಿಸುವ ಆ್ಯಪ್

spot_img
- Advertisement -
- Advertisement -

ಸಿಡ್ನಿ : ಸಾಮಾಜಿಕ ಜಾಲತಾಣದ ಆಧುನಿಕ ಯುಗದಲ್ಲಿ ಯುವಕ ಯುವತಿಯರು ಪುಸ್ತಕ ಓದುವ ಹವ್ಯಾಸದಿಂದ ದೂರವಾಗುತ್ತಿದ್ದಾರೆ  ಎನ್ನುವ ಬೇಸರದ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ‘ಟಿಕ್ ಟಾಕ್’ ಕಿರು ವಿಡಿಯೋ ಜಾಲತಾಣವು ‘ಬುಕ್ ಟಾಕ್’ ಎಂಬ ಅಭಿಯಾನ ಆರಂಭಿಸಿದೆ.

ಯುವಜನರು ತಾವು ಪುಸ್ತಕ ಓದುವುದು, ಆಸಕ್ತಿದಾಯಕ ವಿಚಾರಗಳನ್ನು ಹೇಳುವುದು, ಸ್ವಾರಸ್ಯಕರ ಘಟನೆಯ ಜೊತೆಗೆ ಪುಸ್ತಕ ಓದುವ ‘ಸುಖ’ದ ಕುರಿತು ವಿವರಿಸುವ ಒಂದು ನಿಮಿಷಕ್ಕಿಂತ ಕಡಿಮೆ ಇರುವ ವಿಡಿಯೋಗಳನ್ನು ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡುವ , ಹ್ಯಾಶ್ ಟ್ಯಾಗ್ ಹಾಕಿ ಬೇರೆಯವರಿಗೂ ಪುಸ್ತಕ ಓದುವ ಅಭಿರುಚಿ ಬೆಳೆಸುವ ಅಭಿಯಾನವೇ ಬುಕ್ ಟಾಕ್ ಆಗಿದೆ.

ಭಾರತದಲ್ಲಿ ಟಿಕ್ ಟಾಕ್ ಆ್ಯಪ್ ಅನ್ನು ನಿಷೇಧಿಸಿರುವ ಕಾರಣ ಬುಕ್ ಟಾಕ್ ಅಭಿಯಾನವನ್ನು ಫೇಸ್ ಬುಕ್ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್’ಗಳ ಮೂಲಕ ಅಭಿಯಾನವನ್ನು ಕೈಗೊಳ್ಳಬಹುದಾಗಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!