ಈಕೆ ದೀಪಾಲಿ ಇಕೆ ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ. ಈಕೆಯ ತಂದೆ ಇವಳನ್ನು ತುಂಬಾ ಮುದ್ದಾಗಿ ಸಾಕುತ್ತಿದ್ದರು ಇವರ ತಂದೆ ಚೆನ್ನಾಗಿ ಓದಿಸುತ್ತಿದರು ಹಾಗಾಗಿ ಆಕೆಗೆ ಐಎಎಸ್ ಆಫೀಸರ್ ಆಗಬೇಕು ಎಂದು ಅಂದುಕೊಳ್ಳುತ್ತಿರುವಾಗಲೇ ತಂದೆಯ ಬಿಜಿನೆಸ್ ನಷ್ಟಕ್ಕೆ ಸಿಲುಕಿತು ಮಗಳನ್ನು ಓದಿಸುವುದಕ್ಕೆ ಅವರ ಕೈಯಲ್ಲಿ ಹಣವಿರಲಿಲ್ಲ.
ತನ್ನನ್ನು ಓದುವುದಕ್ಕೂ ಆಗದ ಪರಿಸ್ಥಿತಿಯಲ್ಲಿ ಸಿಲುಕಿದ ತಂದೆಯ ಕಷ್ಟವನ್ನು ನೋಡಿದ ದೀಪಾಲಿ ಓದುವುದನ್ನು ನಿಲ್ಲಿಸಿ ಟಿಫನ್ ತಯಾರಿ ಮಾಡಿ ಬೀದಿಗಳಲ್ಲಿ ಮಾರುತ್ತಿದ್ದಲು ಅದರ ಜೊತೆಗೆ ಹಾಸ್ಟೆಲ್ ಗೆ ಅಡಿಗೆ ಮಾಡಿಕೊಡುತ್ತಿದ್ದಳು. ಈ ಕೆಲಸ ಮಾಡಿ ಬಂದ ಹಣದಿಂದ ಮನೆಯ ನಿರ್ವಹಣೆ ಮಾಡುತ್ತಿದ್ದ ಕೈಯಲ್ಲಿ ಒಂದು ರೂಪಾಯಿ ನಿಲ್ಲಲಿಲ್ಲ. ಕೆಲಸವನ್ನು ಹುಡುಕಿಕೊಂಡು ಇಂಡೋರ್ ಗೆ ಹೋದಳು.

ಅಲ್ಲಿ ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು ಹೀಗೆ ಕೆಲವು ತಿಂಗಳು ಕಳೆದ ನಂತರ ಆಕೆಗೆ ಒಂದು ಪ್ಲಾನ್ ಒಳಿತು ಪ್ರತಿದಿನ ಮಾರುಕಟ್ಟೆ ನೋಡುತ್ತಿದ್ದ ದೀಪಾಲಿಗೆ ನಾನು ಯಾಕೆ ಮಧ್ಯವರ್ತಿಯ ಕೆಲಸ ಮಾಡಬಾರದು ಎಂದು ಅನಿಸುತ್ತದೆ. ಅದರಂತೆಯೇ ಗೋಧಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಸುರುಮಾಡಿದಳು ದೀಪಾಲಿ ಬರೀ ಗಂಡಸರೇ ಮಾಡುತ್ತಿದ್ದ ಟ್ರೇಡಿಂಗ್ ಕೆಲಸವನ್ನು ದೀಪಾಲಿ ಶುರು ಮಾಡಿದಾಗ ಎಲ್ಲರೂ ನಗಾಡಿ ಗೇಲಿ ಮಾಡಿದರೂ ಎಷ್ಟೇ ಅವಮಾನ ಗಳಾದರೂ ಪಟ್ಟುಹಿಡಿದದ್ದನ್ನು ಅಂದುಕೊಂಡಿದ್ದನ್ನು ಸಾಧಿಸಿ ಕೊನೆಗೆ ಸ್ವಂತ ಟ್ರೇಡಿಂಗ್ ಫಾರ್ಮ್ ಅನ್ನು ಪ್ರಾರಂಭಿಸಿದರು.

ರೈತರು ಮತ್ತು ವ್ಯಾಪಾರಸ್ಥರ ನಂಬಿಕೆ ಗಳಿಸಿ ಬರಿ ಒಂದು ವರ್ಷದಲ್ಲಿ 60 ಕೋಟಿ ರೂಪಾಯಿ ವ್ಯವಹಾರ ಮಾಡಿ ಲಾಭ ಪಡೆದಳು ದೀಪಲಿ ಹಾಗೆ ಟ್ರೇಡಿಂಗ್ ಕೆಲಸ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಇಕೆಗೆ 28 ವರ್ಷ ಮಾತ್ರ ಈಗ ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.ಈಕೆ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ನಮ್ಮ ಸುತ್ತಮುತ್ತ ಇರುವ ಪರಿಸರದ ಅವಕಾಶಗಳನ್ನು ಬಳಸಿಕೊಂಡು ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು ಎಂಬ ನಿರ್ದೇಶನ ಈ ದೀಪಲಿ ಯಿಂದ ತಿಳಿದುಬಂದಿದೆ ದೃಢವಾದ ಮನಸ್ಸು ಇರಬೇಕು ಅಷ್ಟೇ ಏನು ಬೇಕಾದರೂ ಸಾಧಿಸಬಹುದು.