Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮೂಲ ಸೌಕರ್ಯಗಳಿಂದ ವಂಚಿತರಾದ ವೃದ್ಧೆ;  ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿ ಮೂಲ ಸೌಕರ್ಯ...

ಬೆಳ್ತಂಗಡಿ : ಮೂಲ ಸೌಕರ್ಯಗಳಿಂದ ವಂಚಿತರಾದ ವೃದ್ಧೆ;  ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿ ಮೂಲ ಸೌಕರ್ಯ ಒದಗಿಸುವ ಭರವಸೆ; ಇದು “ಮಹಾಎಕ್ಸ್ ಪ್ರೆಸ್” ವರದಿ IMPACT

- Advertisement -
- Advertisement -

ಬೆಳ್ತಂಗಡಿ : ಮೂಲ ಸೌಕರ್ಯ ಇಲ್ಲದೆ ಕಳೆದ 10-15 ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ಸರಕಾರಿ ಜಾಗದಲ್ಲಿ ಸಿಮೆಂಟ್ ಬ್ಲಾಕ್ ಮತ್ತು ಸೀಟ್ ನಿಂದ ನಿರ್ಮಿಸಿದ ಕುಠೀರದಲ್ಲಿ ಹಬೆ ಬರುವ ನೆಲದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಡೀಕಮ್ಮ(70) ಅವರ ಬದುಕಿನ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಮತ್ತು ಮಹಾಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ಜೂ.26 ರಂದು ಬೆಳಗ್ಗೆ ವರದಿಯನ್ನು ಪ್ರಸಾರ ಮಾಡಿತ್ತು‌‌‌. ವರದಿ ಪ್ರಸಾರವಾದ   ಬೆನ್ನಲ್ಲೇ ಅಳದಂಗಡಿ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ವಿಜೇತ್.ಬಿ ಮತ್ತು ಗ್ರಾ.ಪಂ ಸದಸ್ಯ ಪ್ರವೀಣ್ ಜೂ.26 ರಂದು 12:30 ಗಂಟೆಗೆ ಪಿಲ್ಯ ಗ್ರಾಮದ ನಿನ್ನಿಕಲ್ಲು ನಿವಾಸಿ ಡೀಕಮ್ಮ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಅಗತ್ಯ ದಾಖಲೆಗಳಾದ ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ಮಾಡಿಕೊಡದಾಗಿ ತಿಳಿಸಿದ್ದಾರೆ. ಮುಂದಿನ ಹಂತದಲ್ಲಿ ಜಂಟಿ ಖಾತೆಯಲ್ಲಿರುವ ಪಟ್ಟಾಸಳದಲ್ಲಿ ಮನೆ ನಿರ್ಮಿಸುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಎಂದು ಭರವಸೆ ನೀಡಿದರು.

ಮಹಾ ಎಕ್ಸ್ ಪ್ರೆಸ್ ವರದಿಯಿಂದ ಎಚ್ಚೆತ್ತು  ಒಂದೇ ದಿನದಲ್ಲಿ ಡೀಕಮ್ಮ ಅಜ್ಜಿಯ ಬಗ್ಗೆ ಕಾಳಜಿವಹಿಸಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಭರವಸೆಯ ಮಾತುಗಳನ್ನು ಹೇಳಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಭೇಟಿ ವೇಳೆ ಅಳದಂಗಡಿ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ವಿಜೇತ್ ಬಿ ,ಗ್ರಾಮ ಪಂಚಾಯತ್  ಸದಸ್ಯರ ಪ್ರವೀಣ್, ಸ್ಥಳೀಯ ಸಂತೋಷ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!