Tuesday, May 7, 2024
Homeತಾಜಾ ಸುದ್ದಿವಿದ್ಯಾರ್ಥಿಗಳ ಗಮನಕ್ಕೆ: ಶೀಘ್ರದಲ್ಲೇ ಶಾಲೆಗಳು ಆರಂಭ, 2 ಶಿಫ್ಟ್ ನಲ್ಲಿ ನಡೆಯಲಿವೆ ತರಗತಿಗಳು..

ವಿದ್ಯಾರ್ಥಿಗಳ ಗಮನಕ್ಕೆ: ಶೀಘ್ರದಲ್ಲೇ ಶಾಲೆಗಳು ಆರಂಭ, 2 ಶಿಫ್ಟ್ ನಲ್ಲಿ ನಡೆಯಲಿವೆ ತರಗತಿಗಳು..

spot_img
- Advertisement -
- Advertisement -

ಕೊರೋನಾ ಸೋಂಕು ಸುದೀರ್ಘ ಕಾಲ ಉಳಿಯುವ ಹಿನ್ನೆಲೆಯಲ್ಲಿ ಲಾಕ್ಡೌನ್ ಮುಗಿದ ಬಳಿಕ ಶಾಲೆಗಳನ್ನು ಓಪನ್ ಮಾಡಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ 2 ಪಾಳಿಯಲ್ಲಿ (ಶಿಫ್ಟ್ ನಲ್ಲಿ) ತರಗತಿಗಳನ್ನು ನಡೆಸಲು ಮುಂದಾಗಿದೆ.

ಈ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಪ್ರತಿದಿನ ಬೆಳಗ್ಗೆ 7.50ರಿಂದ ಮಧ್ಯಾಹ್ನ 12.20ರವರೆಗೆ ಮೊದಲನೇ ಪಾಳಿ ಮತ್ತು ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ ಎರಡನೇ ಪಾಳಿ ತರಗತಿಗಳನ್ನು ನಡೆಸಬೇಕು. ಇದಕ್ಕೆ ಅನುಗುವಾಗಿ ಶಾಲೆಗಳು ವೇಳಾ ಪಟ್ಟಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು.ಶಿಕ್ಷಕರು ಕೂಡ ವೇಳಾಪಟ್ಟಿಯಂತೆ ಒಂದು ಪಾಳಿಯಲ್ಲಿ ಮಾತ್ರ ಕೆಲಸ ಮಾಡಬಹುದು ಎಂದು ಸೂಚಿಸಿದೆ.

ಕೊರೋನಾ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದು ಸೇರಿದಂತೆ ಮಾರ್ಗಸೂಚಿ ಅನುಸಾರ ಪಾಳಿಯಲ್ಲಿ ಶಾಲೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!