Thursday, June 25, 2026
Homeಅಪರಾಧಮೀನು ಮಾರಾಟದ ಕಂಪೆನಿಗೆ ಲಕ್ಷಾಂತರ ರೂ ವಂಚನೆ; ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮೀನು ಮಾರಾಟದ ಕಂಪೆನಿಗೆ ಲಕ್ಷಾಂತರ ರೂ ವಂಚನೆ; ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಮಲ್ಪೆ: ವ್ಯಕ್ತಿಯೋರ್ವ ತಾನು ಮೀನು ಮಾರಾಟ ಮಾಡುತ್ತಿದ್ದ ಕಂಪೆನಿಯೊಂದಕ್ಕೆ ಮೀನು ಮಾರಾಟದ ಹಣವನ್ನು ನೀಡದೆ ಸ್ವಂತಕ್ಕೆ ಬಳಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಮಾಡಿದ ವ್ಯಕ್ತಿಯನ್ನು ಪ್ರಶಾಂತ ಎನ್ನಲಾಗಿದ್ದು, ಈತ ಮಹಾರಾಷ್ಟ್ರ, ದಕ್ಷಿಣ ಭಾರತ ಕಡೆಗಳಿಗೆ ಹೋಲ್ ಸೇಲ್ ಆಗಿ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ರೆಹಮಾನ್ ಎಂಬವರ ಶರ್ಫುನ್ನೀಸ ಫಿಶ್ ಅಸೋಸಿಯೇಟ್ಸ್‌ನಲ್ಲಿ ಹಲವು ವರ್ಷಗಳಿಂದ ಮಾರ್ಕಿಟಿಂಗ್ ವ್ಯವಹಾರವನ್ನು ನಡೆಸುತ್ತಿದ್ದು, ಕಮಿಷನ್ ಆಧಾರದಲ್ಲಿ ಮೀನು ವ್ಯವಹಾರ ನಡೆಸಿದ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುತ್ತಿದ್ದ. ಆದರೆ ಈತನ ವ್ಯವಹಾರದ ಬಗ್ಗೆ ಅನುಮಾನ ಮೂಡಿ, ವ್ಯವಹಾರದಿಂದ ಬರಬೇಕಾದ ಹಣವು ಸರಿಯಾಗಿ ಸಂಸ್ಥೆಯ ಖಾತೆಗೆ ಜಮಾ ಆಗದೇ ಇರುವುದು ಕಂಡುಬಂದಿದ್ದು, ಈ ಬಗ್ಗೆ ಮೀನು ಖರೀದಿಸಿದ ಗ್ರಾಹಕರನ್ನು ವಿಚಾರಿಸಿದಾಗ ಮೀನು ವ್ಯವಹಾರದ ಹಣವನ್ನು ಪ್ರಶಾಂತ ಅವರಿಗೆ ನೀಡಿರುವುದಾಗಿ ತಿಳಿಸಿದ್ದರು.

ನಂತರದಲ್ಲಿ ಹಣಕಾಸಿನ ಲೆಕ್ಕಚಾರವನ್ನು ಪರಿಶೀಲಿಸಿದಾಗ ಸಂಸ್ಥೆಯ ಅಕೌಂಟಿಗೆ ಒಟ್ಟು ಮೊತ್ತ 90,00,000ರೂ. ಜಮಾ ಆಗದೇ ಇರುವುದು ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಅಬ್ದುಲ್ ರೆಹಮಾನ್ ಅವರು ಉದ್ಯೋಗಿ ಪ್ರಶಾಂತ್ ಮೀನು ಮಾರಾಟದ ಹಣವನ್ನು ಸಂಸ್ಥೆಗೆ ಜಮಾ ಮಾಡದೇ ಸ್ವಂತಕ್ಕೆ ಬಳಸಿ ವಂಚನೆ ಎಸಗಿರುವುದಾಗಿ ಮಲ್ಪೆ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದಾರೆ.

- Advertisement -

Latest News

error: Content is protected !!