Thursday, June 4, 2026
Homeತಾಜಾ ಸುದ್ದಿಬೈಕ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಸಮೇತ ನೀರಿಗೆ ಬಿದ್ದ ಕಳ್ಳ

ಬೈಕ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಸಮೇತ ನೀರಿಗೆ ಬಿದ್ದ ಕಳ್ಳ

- Advertisement -
- Advertisement -

ತುಮಕೂರು: ಬೈಕ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಕದ್ದ ಬೈಕ್ ಸಮೇತ ಕಳ್ಳ ನೀರಿಗೆ ಬಿದ್ದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಬೈಕ್ ಕದ್ದ ಕಳ್ಳ ತಪ್ಪಿಸಿಕೊಳ್ಳಲು ಹೋಗಿ ಸೇತುವೆ ಮೇಲಿನಿಂದ‌ ನೀರಿಗೆ ಬಿದ್ದಿದ್ದು, ಬೈಕ್ ಸಮೇತ ಸುಮಾರು ದೂರ ಕೊಚ್ಚಿ ಹೋಗಿದ್ದಾನೆ.

ಕೊರಟಗೆರೆ ತಾಲೂಕಿನ ಗುಂಡನಪಾಳ್ಯ ಬಳಿಯ ಸೇತುವೆ ಮೇಲೆ ಘಟನೆ ನಡೆದಿದೆ. ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದ್ದು, ನೂರು‌ಮೀಟರ್ ದೂರ ಕೊಚ್ಚಿಕೊಂಡು ಹೋಗಿ ಬಚಾವಾಗಿದ್ದಾನೆ.

ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆ ಬಳಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗುತ್ತಿದ್ದ ಎಂದು ಹೇಳಲಾಗಿದೆ. ಗುಂಡನಪಾಳ್ಯ ಬಳಿ ನೀರಿಗೆ ಬಿದ್ದು ಹುಲಿಕುಂಟೆ ಬಳಿ ಎದ್ದು ಕಳ್ಳ ಪರಾರಿಯಾಗಿದ್ದು,‌ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!