Friday, March 29, 2024
Homeತಾಜಾ ಸುದ್ದಿಹೆಂಡತಿ ಕಾಟಕ್ಕೆ ಬೇಸತ್ತು 1 ತಿಂಗಳಿಂದ ತಾಳೆ‌ ಮರ  ಹತ್ತಿ ಕೂತ ಗಂಡ

ಹೆಂಡತಿ ಕಾಟಕ್ಕೆ ಬೇಸತ್ತು 1 ತಿಂಗಳಿಂದ ತಾಳೆ‌ ಮರ  ಹತ್ತಿ ಕೂತ ಗಂಡ

spot_img
- Advertisement -
- Advertisement -

ಉತ್ತರಪ್ರದೇಶ: ಹೆಂಡತಿ ಕಾಟಕ್ಕೆ ಬೇಸತ್ತು ಗಂಡನೊಬ್ಬ 1 ತಿಂಗಳಿಂದ ತಾಳೆ‌ ಮರ  ಹತ್ತಿ ಕೂತ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಕೋಪ್‌ಗಂಜ್‌ ಗ್ರಾಮದಲ್ಲಿ ನಡೆದಿದೆ.
ರಾಮ್ ತಾಳೆಮರ ಹತ್ತಿ ಕೂತ ವ್ಯಕ್ತಿ.

ರಾಮ್  ಕಳೆದ ಒಂದು ತಿಂಗಳಿನಿಂದ ತಾಳೆ ಮರದ ಮೇಲೆಯೇ ಬೀಡು ಬಿಟ್ಟಿದ್ದಾನೆ . ಈಗ ಅವರು ಯಾವುದೇ ಕಾರಣಕ್ಕೂ ತಾನು ಮನೆಗೆ ಹೋಗೋಲ್ಲ ಅಂತ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡಾ ಇದೆ. ಅಸಲಿಗೆ ರಾಮ್ ಹೆಂಡತಿ ಪಕ್ಕಾ ಜಗಳಗಂಟಿ. ಒಂದಲ್ಲ ಒಂದು ಕಾರಣ ಇಟ್ಟು ಗಂಡನ ಜೊತೆ ಜಗಳ ಆಡೋದು, ಆತನಿಗೆ ಹೊಡೆಯೋದು ಮಾಡ್ತಾನೇ ಇರ್ತಾಳಂತೆ. ಹೆಂಡತಿಯ ಕಾಟ ತಡೆದುಕೊಳ್ಳಲಾಗದೇ ಕೊನೆಗೆ ಮರ ಏರಿ ಕೂತಿದ್ದಾನಂತೆ.

ರಾಮ್‌ ಕುಟುಂಬಸ್ಥರು ಪ್ರತಿನಿತ್ಯ ಹಗ್ಗದ ಮೂಲಕ ಆಹಾರವನ್ನ ಮರದ ಮೇಲೆಯೇ ಕಳಿಸುತ್ತಾರೆ. ಊಟ ಏನಾದರೂ ಕಳಿಸದೇ ಇದ್ದರೆ ಮರದ ಮೇಲಿಂದಾನೇ ಮನೆಯವರಿಗೆ ಹೆದರಿಸೋದು ಬೆದರಿಸೋದು ಮಾಡುತ್ತಾರಂತೆ. ಇನ್ನೂ ಶೌಚಕ್ಕೆ ಹೋಗುವುದಾದರೆ ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಮರದಿಂದ ಇಳಿದು ಎಲ್ಲ ಕೆಲಸ ಮಗಿಸಿ ಮತ್ತೆ ಮರ ಏರಿ ಕುಳಿತುಕೊಳ್ಳುತ್ತಾನೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.

ಸದ್ಯಕ್ಕೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗ್ರಾಮಸ್ಥರಿಗೆ ಈಗ ಹೀಗೆ ಮರ ಏರಿ ಅಲ್ಲೇ ಇರುವುದು ಸರಿ ಕಾಣುತ್ತಿಲ್ಲ. ಈ ಮರ ಸರಿಸುಮಾರು 100 ಎತ್ತರವಿದ್ದು ಅಲ್ಲಿ ಕುಳಿತಿರುವ ರಾಮ್‌ನಿಂದಾಗಿ ಬೇರೆ ಮನೆಯ ಹೆಣ್ಣುಮಕ್ಕಳಿಗೆ ಅಸಮಾಧಾನ ಉಂಟು ಮಾಡಿದೆ. ಮನೆಯ ಹೊರಗಡೆ ಬರುವುದಕ್ಕೂ ಅವರಿಗೆ ಈಗ ಮುಜುಗರವಾಗುತ್ತಿದೆ. ಆದ್ದರಿಂದ ಎಲ್ಲರೂ ರಾಮ್ ‌ನನ್ನ ಮರದಿಂದ ಕೆಳಗೆ ಇಳಿಯಲು ವಿನಂತಿ ಮಾಡಿಕೊಂಡಿದ್ದಾರೆ.

ಆದರೆ ಆತ ಮಾತ್ರ ಎಲ್ಲರ ಮೇಲೆ ಕಲ್ಲು ಇಟ್ಟಿಗೆಯಿಂದ ದಾಳಿ ಮಾಡಿ ಯಾವುದೇ ಕಾರಣಕ್ಕೂ ತಾನು ಮರದಿಂದ ಕೆಳಗೆ ಇಳಿಯುವುದಿಲ್ಲ ಅಂತ ಹೇಳಿದ್ಧಾನೆ. ಆದ್ದರಿಂದ ಗ್ರಾಮಸ್ಥರು ಪೊಲೀಸರಿಗೆ ದೂರು ಕೊಡುವುದು ಅನಿವಾರ್ಯವಾಗಿದೆ. ಪೊಲೀಸರು ಈಗಾಗಲೇ ಬಂದು ಮರ ಏರಿ ಕೂತಿರುವ ರಾಮ್‌ ಅವರ ವಿಡಿಯೋ ಚಿತ್ರಿಕರಣ ಮಾಡಿಕೊಂಡು ಹೋಗಿದ್ದು, ಆತ ಮರದಿಂದ ಕೆಳಗೆ ಇಳಿಯದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ

- Advertisement -
spot_img

Latest News

error: Content is protected !!