Tuesday, December 5, 2023
Homeಉತ್ತರ ಕನ್ನಡಕಾರವಾರ; ವಿವಾಹಿತೆ ಪ್ರಿಯತಮೆಗಾಗಿ ಗಾರೆ ಕೆಲಸ ಮಾಡುತ್ತಿದ್ದ ಮೆಕ್ಯಾನಿಕಲ್ ಇಂಜಿನಿಯರ್

ಕಾರವಾರ; ವಿವಾಹಿತೆ ಪ್ರಿಯತಮೆಗಾಗಿ ಗಾರೆ ಕೆಲಸ ಮಾಡುತ್ತಿದ್ದ ಮೆಕ್ಯಾನಿಕಲ್ ಇಂಜಿನಿಯರ್

- Advertisement -
- Advertisement -

ಕಾರವಾರ:ವಿವಾಹಿತೆ ಪ್ರಿಯತಮೆಗಾಗಿ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬ ಗಾರೆ ಕೆಲಸ ಮಾಡುತ್ತಿದ್ದ
ಸಂಗತಿ ಬಯಲಾಗಿದೆ.

ತಮಿಳುನಾಡು ಮೂಲದ ಪುದುಕೊಟ್ಟೈ ಜಿಲ್ಲೆಯ ಬೀರ್ ಮೊಯಿದ್ದೀನ್ ಎಂಬ ಇಂಜಿನಿಯರ್ ತನ್ನ ಪ್ರಿಯತಮೆಯಾದ ವಿವಾಹಿತ ಮಹಿಳೆ ಆಯೇಶಾ ರೆಹಮತ್-ಉಲ್ಲಾ ಎಂಬಾಕೆಯೊಡನೆ ಕಾರವಾರಕ್ಕೆ ಬಂದು 6 ತಿಂಗಳಿಂದ ನೆಲೆಸಿದ್ದ ಎನ್ನಲಾಗಿದೆ.

ತಮಿಳುನಾಡು ಪೊಲೀಸ್ ಠಾಣೆಯಲ್ಲಿ ಆಯೇಶಾ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರು ಶನಿವಾರ ಕಾರವಾರಕ್ಕೆ ಬಂದು ಶಹರ ಠಾಣೆ ಪೊಲೀಸರ ಸಹಕಾರದಿಂದ ಪ್ರೇಮಿಗಳನ್ನು ತವರಿಗೆ ಕರೆದೊಯ್ದಿದ್ದಾರೆ.

ಆಯೇಶಾ ಹಾಗೂ ಬೀರ್ ಮೊಯಿದ್ದೀನ್ ನಡುವೆ 12 ವರ್ಷಗಳ ಹಿಂದಿನಿಂದಲೇ ಪ್ರೇಮವಿತ್ತು. ಆದರೆ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬನ ಜತೆ 10 ವರ್ಷದ ಹಿಂದೆಯೇ ವಿವಾಹ ಮಾಡಿಕೊಡಲಾಗಿತ್ತು. ಇಬ್ಬರು ಮಕ್ಕಳೂ ಇದ್ದರು. ಆದರೆ, ತನ್ನ ಹಳೆಯ ಪ್ರೇಮಿಯ ಸಂಪರ್ಕ ಬಿಡದ ಆಯೇಶಾ 6 ತಿಂಗಳ ಹಿಂದೆ ತನ್ನ ಪತಿ, ಮಕ್ಕಳನ್ನು ಬಿಟ್ಟು ಪ್ರಿಯತಮನ ಜತೆ ಬಂದಿದ್ದಳು. ಜೋಡಿ 6 ತಿಂಗಳಿಂದ ಕಾರವಾರದಲ್ಲಿ ನೆಲೆಸಿತ್ತು. ಮೊಯಿದ್ದೀನ್ ಇಂಜಿನಿಯರ್ ಆಗಿದ್ದರೂ ಇಲ್ಲಿ ಜೀವನಕ್ಕಾಗಿ ಗಾರೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

- Advertisement -
spot_img

Latest News

error: Content is protected !!