Thursday, June 4, 2026
Homeತಾಜಾ ಸುದ್ದಿಸುಳ್ಯ: ನಗರದ ರಸ್ತೆ ಹೊಂಡಗಳಿಗೆ ತೇಪೆ ಕಾರ್ಯ: ಕೆವಿಜಿ ಇಂಜಿನಿಯರಿಂಗ್‌ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಕಾರ್ಯಕ್ಕೆ...

ಸುಳ್ಯ: ನಗರದ ರಸ್ತೆ ಹೊಂಡಗಳಿಗೆ ತೇಪೆ ಕಾರ್ಯ: ಕೆವಿಜಿ ಇಂಜಿನಿಯರಿಂಗ್‌ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಕಾರ್ಯಕ್ಕೆ ಭಾರೀ ಮೆಚ್ಚುಗೆ

- Advertisement -
- Advertisement -

ಸುಳ್ಯ: ಸುಳ್ಯ ನಗರ ಶ್ರೀರಾಂಪೇಟೆಯಲ್ಲಿ ಜ್ಯೂನಿಯರ್ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ರಥ ಬೀದಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ತುಂಬಾ ತೊಂದರೆಯಾಗ್ತಿತ್ತು.

ಇದೀಗ ಕೆವಿಜಿ ಇಂಜಿನಿಯರಿಂಗ್‌ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ.ಎನ್.ಎ.ಜ್ಞಾನೇಶ್ ನೇತೃತ್ವದಲ್ಲಿ ರಸ್ತೆ ಹೊಂಡಕ್ಕೆ ತೇಪೆ ಹಾಕುವ ಕಾರ್ಯ ಮಾಡಲಾಗಿದೆ. .

ಶ್ರೀರಾಂಪೇಟೆ ರಸ್ತೆಯಲ್ಲಿ ನಿರ್ಮಾಣವಾದ ಹೊಂಡದ ಬಗ್ಗೆ ಆರ್‌ಜೆ ತ್ರಿಶೂಲ್ ಅವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ.  ಕೊನೆಗೆ ಜ್ಞಾನೇಶ್ ಅವರು ವಿವಿಧ ಕಡೆಗಳಲ್ಲಿರುವ ಹೊಂಡಗಳನ್ನು ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಮುಚ್ಚಿಸಿದ್ದಾರೆ. ಜ್ಞಾನೇಶ್ ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

- Advertisement -

Latest News

error: Content is protected !!