Thursday, June 4, 2026
HomeUncategorizedಬಂಟ್ವಾಳ ದಲ್ಲಿ‌ ಬಾರ್, ಅಂಗಡಿಗಳಲ್ಲಿ ‌ಸರಣಿ‌ ಕಳ್ಳತನ

ಬಂಟ್ವಾಳ ದಲ್ಲಿ‌ ಬಾರ್, ಅಂಗಡಿಗಳಲ್ಲಿ ‌ಸರಣಿ‌ ಕಳ್ಳತನ

- Advertisement -
- Advertisement -

ಬಂಟ್ವಾಳ : ಕಳ್ಳರು ಬಾರ್‌ ಹಾಗೂ‌ ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನ ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ರಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ವಗ್ಗ ವಿರೇಂದ್ರ ಅಮೀನ್ ಮಾಲೀಕತ್ವದ ರಾಜೇಶ್ ಬಾರ್‌ಗೆ ನುಗ್ಗಿದ ಕಳ್ಳರು ಕ್ಯಾಷ್‌ ಕೌಂಟರ್‌ನಲ್ಲಿದ್ದ 7,500 ರೂ. ನಗದು ಹಾಗೂ ಸಿ.ಸಿ.ಕ್ಯಾಮರಾದ ಡಿವಿಆರ್ ಹಾಗೂ ಇಂಟರ್‌ನೆಟ್‌ ಪರಿಕರಗಳನ್ನು ಕಳ್ಳತನ ಮಾಡಿದ್ದಾರೆ. ಹಾಗೂ ಕೆಲವು ವಸ್ತುಗಳನ್ನು ಹಾಳುಗೆಡವಿದ್ದಾರೆ.

ಅದಲ್ಲದೇ ಅಲ್ಲೇ ಹತ್ತಿರದಲ್ಲಿ ಸುಮಾರು 7 ಅಂಗಡಿಗಳ ಬೀಗ ಮುರಿದು ಒಳನುಗ್ಗಿ ಜಾಲಾಡಿದ್ದಾರೆ ವಗ್ಗ ಸಮೀಪದ ಮದ್ವ ಎಂಬಲ್ಲಿ ಗೋಪಾಲ ಎಂಬವರ ಫ್ಯಾನ್ಸಿ ಹಾಗೂ ದಿನಸಿ ಅಂಗಡಿಗಳಿಗೂ ನುಗ್ಗಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ

- Advertisement -

Latest News

error: Content is protected !!