Monday, June 8, 2026
Homeತಾಜಾ ಸುದ್ದಿಅತ್ತೆಯನ್ನು ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಸೊಸೆ: ಕೋಪಕ್ಕೆ ಅತ್ತೆ ಮಾವ ಮಾಡಿದ್ದೇನು...

ಅತ್ತೆಯನ್ನು ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಸೊಸೆ: ಕೋಪಕ್ಕೆ ಅತ್ತೆ ಮಾವ ಮಾಡಿದ್ದೇನು ಗೊತ್ತಾ?

- Advertisement -
- Advertisement -

ಅಮೇರಿಕಾ​: ಅತ್ತೆ ಸೊಸೆ ಮಧ್ಯೆ ಜಗಳ ಇಂದು ನಿನ್ನೆಯದಲ್ಲ. ಅದಕ್ಕೆ ಕೆಲವೊಮ್ಮೆ ಕಾರಣವೇ ಬೇಕಾಗಿಲ್ಲ. ಆದರೆ ಇಲ್ಲೊಂದು ಅತ್ತೆ ಸೊಸೆ ಜಗಳದ ಕಥೆ ಕೇಳಿದ್ರೆ ನೀವು ಮೂರು ಮೇಲೆ ಬೆರಳಿಡೋದು ಪಕ್ಕಾ…

ಹೌದು…ಫೇಸ್​ಬುಕ್​ನಲ್ಲಿ ಫ್ರೆಂಡ್ಸ್​ ಆಗಿದ್ದ ಅತ್ತೆ ಸೊಸೆ, ಅದೇ ಫೇಸ್​ಬುಕ್​ನಿಂದಾಗಿ ಸಂಬಂಧವನ್ನೇ ಮುರಿದುಕೊಂಡಿರುವ ಘಟನೆಯೊಂದು ಅಮೇರಿಕಾದಲ್ಲಿ ನಡೆದಿದೆ.

40 ವರ್ಷದ ಆ ಮಹಿಳೆಗೆ ಆಕೆಯ ಅತ್ತೆ ಮಾವ ಫೇಸ್​ಬುಕ್​ನಲ್ಲಿ ಫ್ರೆಂಡ್​ ಆಗಿದ್ದರಂತೆ. ಅತ್ತೆ ಮಾವನಿಂದ ದೂರದ ಊರಲ್ಲಿ ಗಂಡ ಮತ್ತು ಮಗನೊಂದಿಗಿದ್ದ ಮಹಿಳೆ ಆಗಾಗ ಕೆಲ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಿದ್ದಳಂತೆ. ಮಗನೊಂದಿಗೆ ಮತ್ತು ಗಂಡನೊಂದಿಗೆ ಹಾಕುತ್ತಿದ್ದ ಫೋಟೋಗಳಿಗೆ ಆಕೆಯ ಮಾವ ಒಳ್ಳೆಯ ರೀತಿಯಲ್ಲಿ ಕಾಮೆಂಟ್​ ಹಾಕುತ್ತಿದ್ದರಂತೆ. ಆದರೆ ಆಕೆ ಫ್ರೆಂಡ್ಸ್​ ಜತೆ ಇರುವ ಫೋಟೋಗಳನ್ನು ಹಾಕಿದರೆ ಬೈಯುವ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದರಂತೆ. ಕೆಲ ಫೋಟೋಗಳಿಗೆ ನಿನ್ನ ಮಗ ಈ ಫೋಟೋ ನೋಡದಿದ್ದರೆ ಸಾಕು, ಏನು ಕುಡಿದು ಫೋಟೋ ತೆಗೆಸಿಕೊಂಡಿದ್ದೀಯಾ ಎಂದೆಲ್ಲ ಹಾಕಿ ಆಕೆಯ ಮನಸ್ಸಿಗೆ ನೋವುಂಟು ಮಾಡಿದ್ದರಂತೆ. ಇದರಿಂದ ನೋವಾದ ಮಹಿಳೆ ಅತ್ತೆ ಮಾವನನ್ನು ಫೇಸ್​ಬುಕ್​ನಲ್ಲಿ ಅನ್​ಫ್ರೆಂಡ್​ ಮಾಡಿದ್ದಾಳೆ.

ಒಂದು ದಿನ ಅತ್ತೆ ಮಹಿಳೆಗೆ ಕರೆ ಮಾಡಿದ್ದಾಳೆ. ನಮ್ಮನ್ನು ಫೇಸ್​ಬುಕ್​ನಲ್ಲಿ ಯಾಕೆ ಅನ್​ಫ್ರೆಂಡ್​ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ನನ್ನ ಫೇಸ್​ಬುಕ್​ನಲ್ಲಿ ಕೇವಲ ಸ್ನೇಹಿತರನ್ನು ಇಟ್ಟುಕೊಳ್ಳಲು ಬಯಸುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಅದಕ್ಕೆ ಸಿಟ್ಟಾದ ಅತ್ತೆ ಮಾವ ಮಹಿಳೆಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಆಕೆ ತಮ್ಮ ಮನೆಗೆ ಬಾರದಂತೆಯೂ ತಡೆದಿದ್ದಾರೆ. ಮಗ ಮತ್ತು ಮೊಮ್ಮಗ ಬಂದರೆ ಸಾಕು ಎಂದು ಹೇಳಿದ್ದಾರೆ.

ಅವರಿಗೆ 70 ವರ್ಷ ವಯಸ್ಸಾಗಿದೆ. ಆದರೂ ಮಕ್ಕಳಂತೆ ಮಾಡುತ್ತಾರೆ. 70 ದಾಟಿದ ಮೇಲೆ ಅವರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು, ಬದಲಾಗಿ ಸೋಶಿಯಲ್​ ಮೀಡಿಯಾ ಬಗ್ಗೆ ಅಲ್ಲ. ನಾನಿನ್ನೂ 40 ವರ್ಷದ ಮಹಿಳೆ. ನನಗೆ ನನ್ನ ಆಯ್ಕೆಯನ್ನು ಆರಿಸಿಕೊಳ್ಳುವ ಅಧಿಕಾರವಿದೆ. ಯಾವುದೇ ಕಾರಣಕ್ಕೂ ನಾನು ಅವರನ್ನು ಮತ್ತೆ ಫ್ರೆಂಡ್​ ಮಾಡಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡದಿದ್ದರೆ ಅದು ಅವರ ತಪ್ಪು ಎಂದು ಮಹಿಳೆ ವಾದಿಸಿದ್ದಾರೆ. ಇತ್ತ ಅತ್ತೆ ಮಾವ ಕೂಡ ಮಹಿಳೆಯ ವಿರುದ್ಧ ವಾದಿಸಿದ್ದಾರೆ. ಆಕೆ ನಮ್ಮನ್ನು ಫ್ರೆಂಡ್​​ ಮಾಡಿಕೊಳ್ಳುವ ತನಕ ಅವಳು ನಮ್ಮ ಸೊಸೆಯಲ್ಲ ಎಂದು ಅವರು ದೂರಿದ್ದಾರೆ

- Advertisement -

Latest News

error: Content is protected !!