Wednesday, April 24, 2024
Homeಕರಾವಳಿಕಾಸರಗೋಡುಕೇರಳದಲ್ಲಿ ನರಭಕ್ಷಕ ಚಿರತೆಯನ್ನೇ ಕೊಂದು ಸಾರು ಮಾಡಿ ತಿಂದ ಕಿರಾತಕರು: ಅರಣ್ಯ ಇಲಾಖೆಯಿಂದ ಐವರ ಬಂಧನ

ಕೇರಳದಲ್ಲಿ ನರಭಕ್ಷಕ ಚಿರತೆಯನ್ನೇ ಕೊಂದು ಸಾರು ಮಾಡಿ ತಿಂದ ಕಿರಾತಕರು: ಅರಣ್ಯ ಇಲಾಖೆಯಿಂದ ಐವರ ಬಂಧನ

spot_img
- Advertisement -
- Advertisement -

ಕೇರಳ : ನಿಜಕ್ಕೂ ಈ ಸುದ್ದಿಯನ್ನು ಓದಿದ ಮೇಲೆ ಇಂತಹ ಜನಾನೂ ಇರ್ತಾರಾ ಅನ್ನೋ ಅನುಮಾನ ಮೂಡದೇ ಇರೋದಿಲ್ಲ. ಅಂದ್ಹಾಗೆ ಇಂತಹದ್ದೊಂದು ಘಟನೆ ನಡೆದಿರೋದು ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ,

ಹೌದು.. ನಾವೆಲ್ಲಾ ಜಿಂಕೆ, ಕಾಡು ಹಂದಿ, ಮೊಲ, ಉಡ ಹೀಗೆ ಕಾಡು ಪ್ರಾಣಿಗಳನ್ನು ಕೊಂದು ತಿನ್ನುವವರನ್ನು ನೋಡಿದ್ದೇವೆ. ಆದ್ರೆ ಕೇರಳದಲ್ಲಿ ಕಿರಾತಕರ ಗ್ಯಾಂಗ್ ಒಂದು ನರಭಕ್ಷಕ ಚಿರತೆಯನ್ನೇ ಕೊಂದು ತಿಂದಿದೆ. ಚಿರತೆಯನ್ನು ಕೊಂದು ಅದನ್ನು ಚೆನ್ನಾಗಿ ಸಂಬಾರ್ ಮಾಡಿ ತಿಂದ 5 ಜನರನ್ನು ಇದೀಗ ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳದ ಮನಕುಲಂ ಅರಣ್ಯ ವ್ಯಾಪ್ತಿಯ ಇಡುಕ್ಕಿಯಲ್ಲಿ ಈ ಘಟನೆ ನಡೆದಿದೆ. ಅಲ್ಲದೇ ಕೇರಳದಲ್ಲಿ ಇಂತಹದ್ದೊಂದು ಘಟನೆ ನಡೆದಿರೋದು ಇದೇ ಮೊದಲು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಲಿಕೊಲ್ವಿಲ್ ನ ವಿನೋದ್(45), ಕುರಿಯಾ ಕೋಸ್(74), ಸಿ ಎಸ್ ಬಿನು(50), ಮಲಾಯಿಲ್ ಸಾಲಿ ಕಂಜಪ್ಪನ್(54) ವಿನ್ಸೆಂಟ್(50) ಬಂಧಿತ ಆರೋಪಿಗಳು.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಅರಣ್ಯಾಧಿಕಾರಿ  ಪಿ ಜೆ ಸುಹೈಬ್, ಆರೋಪಿ ವಿನೋದ್  ಅರಣ್ಯದಿಂದ 100 ಮೀಟರ್ ದೂರದಲ್ಲಿರುವ ಖಾಸಗಿ ಭೂಮಿಯಲ್ಲಿ ಚಿರತೆ ಹಿಡಿಯಲು ಕುಣಿಕೆ ಹಾಕಿದ್ದ. ಬುಧವಾರ ಬೆಳಗ್ಗೆ ಆರು ವರ್ಷ ಪ್ರಾಯದ ಚಿರತೆ ಕುಣಿಕೆಗೆ ಬಿದ್ದಿದೆ.ಅಲ್ಲಿಂದ ಅದನ್ನು ವಿನೋದ್ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾನೆ.ಅಲ್ಲಿ ಅದನ್ನು ಕೊಂದು ಸಾರು ಮಾಡಿದ್ದಾರೆ. ಬಳಿಕ ಅದರ ಹಲ್ಲು ಹಾಗೂ ಚರ್ಮವನ್ನು ಮನೆಯಲ್ಲಿ ಇರಿಸಿದ್ದಾರೆ, ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿದ ಕೇವಲ ನಾಲ್ಕು ಘಟನೆಯಲ್ಲಿ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಆರೋಪಿಗಳಿಂದ 10 ಕೆ ಜಿ ಚಿರತೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!