- Advertisement -
- Advertisement -
ಬೆಂಗಳೂರು : ನಾಳೆ ನಿಗದಿಯಾಗಿದ್ದ ‘ಎಫ್ ಡಿ ಎ’ ( ಪ್ರಥಮ ದರ್ಜೆ ಸಹಾಯಕ) ಪರೀಕ್ಷೆ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕೆಪಿಎಸ್ ಸಿ ಕಾರ್ಯದರ್ಶಿ ಸತ್ಯವತಿ ಮಾಹಿತಿ ನೀಡಿದ್ದು, ಜನವರಿ 24 ರಂದು ನಿಗದಿಯಾಗಿದ್ದ ಎಫ್ ಡಿ ಎ ಪರೀಕ್ಷೆ ಮುಂದೂಡಲಾಗಿದೆ. ಶೀಘ್ರದಲ್ಲೇ ಪರೀಕ್ಷಾ ನಡೆಯುವ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಎಫ್ ಡಿ ಎ ಪರೀಕ್ಷೆ ಮುಂದೂಡಲಾಗಿದೆ ಎಂದು G. ಸತ್ಯವತಿ ಮಾಹಿತಿ ನೀಡಿದ್ದಾರೆ.

ಅಲ್ಲದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ರಾಚಪ್ಪ,ಚಂದ್ರು ಸೇರಿದಂತೆ ಆರು ಆರೋಪಿಗಳ ಬಂಧಿಸಿದ್ದಾರೆ. ಬಂಧಿತರಿಂದ 24 ಲಕ್ಷ ರೂ. ನಗದು ಮತ್ತು ಮೂರು ವಾಹನಗಳು ಜಪ್ತಿ.
- Advertisement -