Saturday, June 6, 2026
Homeತಾಜಾ ಸುದ್ದಿಗ್ಯಾಂಗ್‌ಸ್ಟರ್‌ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿಗೆ ಗೌರವ ಸಲ್ಲಿಸಿದ ಅಂಚೆ ಇಲಾಖೆ!..

ಗ್ಯಾಂಗ್‌ಸ್ಟರ್‌ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿಗೆ ಗೌರವ ಸಲ್ಲಿಸಿದ ಅಂಚೆ ಇಲಾಖೆ!..

- Advertisement -
- Advertisement -

ಲಖನೌ: ಅಂಚೆ ಇಲಾಖೆ ಯಿಂದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಪದ್ಧತಿಇದೆ. ಈ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯವನ್ನು ಇಲಾಖೆ ಇಟ್ಟುಕೊಂಡಿದೆ.ಆದರೆ ಉತ್ತರ ಪ್ರದೇಶದ ಅಂಚೆ ಇಲಾಖೆಯಿಂದ ಅಚಾತುರ್ಯ ನಡೆದಿದ್ದು ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸುವ ವೇಳೆ ಗ್ಯಾಂಗ್‌ಸ್ಟರ್‌ಗಳ ಚಿತ್ರ ಅಚ್ಚಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಚೆ ಇಲಾಖೆ ಪ್ರಕಟಿಸಿದ ಐದು ರೂ.ನ ಅಂಚೆಚೀಟಿಯಲ್ಲಿ ಗ್ಯಾಂಗ್‌ಸ್ಟರ್‌ಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಅವರ ಚಿತ್ರವಿದ್ದು ಸರ್ಕಾರ ಇವರ ಫೋಟೋ ಪ್ರಕಟಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಕಾರಣವಾದ ಅಂಚೆ ಇಲಾಖೆ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ.

- Advertisement -

Latest News

error: Content is protected !!