Sunday, May 5, 2024
Homeತಾಜಾ ಸುದ್ದಿರಾಜ್ಯದಲ್ಲೀಗ ಕೊರೋನಾ ರೂಪಾಂತರ ವೈರಸ್ ಭೀತಿ: ಹೊಸ ವೈರಸ್ ಸೋಂಕಿನ ಲಕ್ಷಣಗಳೇನು ಗೊತ್ತಾ?

ರಾಜ್ಯದಲ್ಲೀಗ ಕೊರೋನಾ ರೂಪಾಂತರ ವೈರಸ್ ಭೀತಿ: ಹೊಸ ವೈರಸ್ ಸೋಂಕಿನ ಲಕ್ಷಣಗಳೇನು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ಕೊರೋನಾ ರೂಪಾಂತರ ವೈರಸ್ ಈಗಾಗಲೇ ರಾಜ್ಯಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದು ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಈ ವೈರಸ್ ಸೋಂಕಿನ ಲಕ್ಷಣಗಳು ಏನು ಅನ್ನೋ ಕುತಹಲ ಎಲ್ಲರಲ್ಲೂ ಇರುತ್ತೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ…

ರಾಜ್ಯಕ್ಕೆ ಕಾಲಿಟ್ಟಿರುವಂತ ಬ್ರಿಟನ್ ವೈರಸ್ ಲಕ್ಷಣಗಳು ಹೀಗೆ ಎಂದು ಹೇಳೋದಕ್ಕೆ ಕಷ್ಟ ಎನ್ನಲಾಗುತ್ತಿದೆ. ಹೊಸ ವೈರಸ್ ಗೆ ಹತ್ತಾರು ಲಕ್ಷಣಗಳಿವೆ ಎನ್ನಲಾಗುತ್ತಿದೆ. ಅಂತಹ ಲಕ್ಷಣಗಳಲ್ಲಿ ಬ್ರಿಟನ್ ವೈರಸ್ ಅಟ್ಯಾಕ್ ಆದ್ರೇ ಹಸಿವಾಗಲ್ಲ ಎಂದು ಹೇಳಲಾಗುತ್ತಿದೆ. ಸಿಕ್ಕಾಪಟ್ಟೆ ಜ್ವರ ಬರುತ್ತಂತೆ. ಜ್ವರ ಹೆಚ್ಚಾಗಿ ಮೈ ಮೇಲೆ ಗುಳ್ಳೆ ಏಳುತ್ತೆವೆ ಎನ್ನಲಾಗಿದೆ.

ಇನ್ನೂ ಮುಂದುವರೆದು ವಾಸನೆ ಗೊತ್ತಾಗಲ್ಲ, ರುಚಿ ಸಿಗೋದೇ ಇಲ್ಲ ಅಂತೆ. ಒಣ ಕಫ ಆದ್ರೆ ಅದು ಹೊಸ ಕೊರೋನಾ ರೂಪಾಂತರ ವೈರಲ್ ಲಕ್ಷಣ ಎನ್ನಲಾಗಿದೆ. ತಲೆ ನೋವು, ಸ್ನಾಯು ನೋವು ಕಾಣಿಸಿಕೊಳ್ಳುತ್ತಂತೆ. ಕೆಲವರಿಗೆ ಬ್ಯಾಕ್ ಪೈನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಮೊದಲಾದಂತ ಹತ್ತಾರು ಲಕ್ಷಣಗಳು ಹೊಸ ಕೊರೋನಾ ರೂಪಾಂತರ ವೈರಸ್ ಲಕ್ಷಣಗಳು ಎನ್ನಲಾಗುತ್ತಿದೆ. ಅಲ್ಲದೇ ಬಹುತೇಕ ಕೊರೊನಾದ ಲಕ್ಷಣಗಳೇ ಇದ್ದು ಪರಿಣಾಮ ಮಾತ್ರ ಕೊಂಚ ತೀವ್ರವಾಗಿರುತ್ತದೆ ಅಂತಾ ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!