Friday, June 5, 2026
Homeಕರಾವಳಿಪುತ್ತೂರಿನ ಸವಣೂರು ಸುತ್ತಮುತ್ತ ಚಿರತೆ ಪ್ರತ್ಯಕ್ಷ

ಪುತ್ತೂರಿನ ಸವಣೂರು ಸುತ್ತಮುತ್ತ ಚಿರತೆ ಪ್ರತ್ಯಕ್ಷ

- Advertisement -
- Advertisement -

ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಪುತ್ತೂರಿನ ಬನ್ನೂರು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಹಾಗೂ ಪಾಲ್ತಾಡಿ ಗ್ರಾಮದ ಬಂಬಿಲ ಪ್ರದೇಶದಲ್ಲಿ ಕೆಲತಿಂಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದು ಜನ ಆತಂಕದಲ್ಲಿ ದಿನ ದೂಡುವಂತಾಗಿದೆ.

ನಿನ್ನೆ ಸುಮಾರು 5:30ರ ವೇಳೆಗೆ ತಾಲೂಕಿನ ಸರ್ವೆ ಹಾಗೂ ಎಲಿಯ ಪ್ರದೇಶದಲ್ಲಿ ಚಿರತೆ ಕಂಡುಬಂದಿದೆ. ಅಲ್ಲದೇ ನಿನ್ನೆ ರಾತ್ರಿ ವೇಳೆ ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಬಳಿ ಚಿರತೆ ಕಾಣ ಸಿಕ್ಕಿದ್ದು, ನೆಲ್ಯಾಜೆ ವಿಶ್ವನಾಥ ರೈ ಎಂಬವರ ಮನೆಯ ಕೋಳಿಯೊಂದನ್ನು ಹಿಡಿದು ತಿಂದಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!