Friday, July 10, 2026
Homeಕರಾವಳಿಮಂಗಳೂರುಕಡಬ: ನೇಣು ಬಿಗಿದುಕೊಳ್ಳುವಾಗ ಹಗ್ಗ ತುಂಡಾಗಿ ಗಾಜಿನ ಚೂರಿನ ಮೇಲೆ ಬಿದ್ದು ಯುವಕ ಸಾವು

ಕಡಬ: ನೇಣು ಬಿಗಿದುಕೊಳ್ಳುವಾಗ ಹಗ್ಗ ತುಂಡಾಗಿ ಗಾಜಿನ ಚೂರಿನ ಮೇಲೆ ಬಿದ್ದು ಯುವಕ ಸಾವು

- Advertisement -
- Advertisement -

ಕಡಬ: ನೇಣು ಬಿಗಿದುಕೊಳ್ಳುವಾಗ ಹಗ್ಗ ತುಂಡಾಗಿ ಗಾಜಿನ ಚೂರಿನ ಮೇಲೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿ ನಿವಾಸಿ ಗಣಪಯ್ಯ ಅವರ ಮಗ ಸೋಮಶೇಖರ್ ಹೆಚ್ (27) ಮೃತ ಯುವಕ.

ಸೋಮಶೇಖರ್ ಪ್ರತೀದಿನ ಮನೆಯವರಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ದಿನಾಂಕ 10.07.2026 ರಂದು ಬೆಳಗ್ಗಿನ ಜಾವದ ಅವಧಿಯಲ್ಲಿ ಸೋಮಶೇಖರ್ ಮನೆಯಲ್ಲಿ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು,  ಆ ವೇಳೆ ನೇಣಿಗೆ ಬಳಸಿದ ಹಗ್ಗ ತುಂಡಾಗಿ ದೇಹವು ನೆಲದಲ್ಲಿ ಬಿದ್ದಿದ್ದ ಗ್ಲಾಸ್ ಚೂರುಗಳ ಮೇಲೆ ಕವುಚಿ ಬಿದ್ದು ಮೃತಪಟ್ಟಿದ್ದಾನೆ ಎಂಬುದಾಗಿ ತಂದೆ ಗಣಪಯ್ಯ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!