Friday, July 10, 2026
Homeಕರಾವಳಿಮಂಗಳೂರುಸುಬ್ರಹ್ಮಣ್ಯದ ಲಾಡ್ಜ್ ನಲ್ಲಿ ಯುವಕ ಆತ್ಮಹ*ತ್ಯೆ

ಸುಬ್ರಹ್ಮಣ್ಯದ ಲಾಡ್ಜ್ ನಲ್ಲಿ ಯುವಕ ಆತ್ಮಹ*ತ್ಯೆ

- Advertisement -
- Advertisement -

ಕಡಬ: ಸುಬ್ರಹ್ಮಣ್ಯ ಗ್ರಾಮದ ಅಜ್ಜಿಹಿತ್ಲು ಎಂಬಲ್ಲಿರುವ ಲಾಡ್ಜ್‌ ಒಂದರಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮನಗರದ ಉಚ್ಚಮ್ಮನದೊಡ್ಡಿ ನಿವಾಸಿ ಮಧು ಎಸ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ.

ಜಗದೀಶ್ ಪಡ್ಪು ಎಂಬವರು ಸುಬ್ರಹ್ಮಣ್ಯದ ಅಜ್ಜಿಹಿತ್ಲು ಬಳಿ ಇರುವ ಲಾಡ್ಜ್‌ ಒಂದನ್ನು ಲೀಸ್ಗೆ ಪಡೆದುಕೊಂಡು ನಡೆಸುತ್ತಿದ್ದಾರೆ. ದಿನಾಂಕ 08-07-2026ರಂದು ಮಧ್ಯಾಹ್ನ ಮಧು ಎಸ್ ಈ ಲಾಡ್ಜ್  ಬಂದು ಬಾಡಿಗೆಗೆ ರೂಮ್ ಪಡೆದುಕೊಂಡಿದ್ದರು. ದಿನಾಂಕ 09-07-2026ರಂದು ಸಾಯಂಕಾಲ ಲಾಡ್ಜ್ ನವರು ಆತನಿದ್ದ ರೂಮ್ ಬಳಿ ತೆರಳಿ ಬಾಗಿಲು ತೆಗೆಯಲು ಸೂಚಿಸಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ವೇಳೆ ಕಿಟಕಿಯ ಮೂಲಕ ನೋಡಿದಾಗ ಮಧು ಎಸ್ ರೂಮ್‌ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಈ ಬಗ್ಗೆ ಜಗದೀಶ್ ಪಡ್ಪು ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ: 15/2026 ಕಲಂ: 194(3)(4) BNSS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!