Friday, May 10, 2024
Homeತಾಜಾ ಸುದ್ದಿಅಡಿಕೆ ಹಾನಿಕಾರಕ ಅಂತ ಹೇಳಬೇಡಿ : ಗೃಹ ಸಚಿವ ಆರಗ ಜ್ಞಾನೇಂದ್ರ

ಅಡಿಕೆ ಹಾನಿಕಾರಕ ಅಂತ ಹೇಳಬೇಡಿ : ಗೃಹ ಸಚಿವ ಆರಗ ಜ್ಞಾನೇಂದ್ರ

spot_img
- Advertisement -
- Advertisement -

ಅಡಿಕೆ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ಬೆಳೆ. ಇಲ್ಲಿನ ಸಾವಿರಾರು ಕುಟುಂಬಗಳು ಈ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಈ ಮಧ್ಯೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಿಕೆ ಹಾನಿಕಾರಕವಾಗಿದ್ದು, ಅದನ್ನ ಬ್ಯಾನ್ ಮಾಡಬೇಕು ಎಂದಿದ್ರು. ಇದು ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರಕ್ಕೆ, ಕರ್ನಾಟಕ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ ನಿಯೋಗ ಮನವಿ ಮಾಡಿದೆ. ಅಲ್ಲದೇ ಈ ವಿಚಾರ ಕೋರ್ಟ್ನಲ್ಲಿ ಬಗೆಹರಿಯೋವರೆಗೂ ಯಾರೂ ಅಡಿಕೆ ಹಾನಿಕಾರಕ ಎಂಬ ಹೇಳಿಕೆ ನೀಡಬಾರದು ಅಂತ ಗೃಹ ಸಚಿವರು ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಸಂಶೋಧನೆ ನಡೆಯುತ್ತಿದ್ದು, ಅಡಿಕೆ ಬೆಳೆ ಹಾನಿಕಾರಕ ಅಲ್ಲಾ ಎಂಬುದಕ್ಕೆ ಒಂದು ಪುಷ್ಟಿ ದೊರೆಯಲಿದೆ ಹಾಗೂ ಇದರಿಂದ ಬಹಳ ದೊಡ್ಡ ಯಶಸ್ಸು ನಮಗೆ ದೊರೆಯಲಿದೆ ಎಂದರು.

- Advertisement -
spot_img

Latest News

error: Content is protected !!