Monday, June 8, 2026
Homeತಾಜಾ ಸುದ್ದಿಆಧುನಿಕತೆಯ ಮಧ್ಯೆ ಮೂಢನಂಬಿಕೆಯ ಪರಾಕಾಷ್ಠೆ-ಎಳೆ ಮಗುವಿನ ಪ್ರಾಣದೊಂದಿಗೆ ಆಟವಾಡಿದ ಅರ್ಚಕ!..

ಆಧುನಿಕತೆಯ ಮಧ್ಯೆ ಮೂಢನಂಬಿಕೆಯ ಪರಾಕಾಷ್ಠೆ-ಎಳೆ ಮಗುವಿನ ಪ್ರಾಣದೊಂದಿಗೆ ಆಟವಾಡಿದ ಅರ್ಚಕ!..

- Advertisement -
- Advertisement -

ಹಾವೇರಿ: ಇಲ್ಲಿನ ರಟ್ಟಿಹಳ್ಳಿಯ ಬುಳ್ಳಾಪುರ ಗ್ರಾಮದಲ್ಲಿ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಅರ್ಚಕರೊಬ್ಬರು ಮಗುವನ್ನು ಎಡಗೈಲಿ ಎತ್ತಿ ಹಿಡಿದು, ಬಿಸಿ ಕೆಂಡದ ಮೇಲೆ ನಡೆದಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹರಕೆಯ ಹೆಸರಿನಲ್ಲಿ ಎಳೆ ಮಗುವನ್ನುಅರ್ಚಕರ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗಿದೆ. ದೇವರ ಹೆಸರಿನಲ್ಲಿ ಇಂತಹ ಅಪಾಯಕಾರಿ ಪ್ರಯತ್ನ ಸಾಕಷ್ಟು ಟೀಕೆಗೆ ಕಾರಣ ವಾಗಿದೆ.

ಹಾವೇರಿ ಜಿಲ್ಲೆಯ ಬುಳ್ಳಾಪುರ ಗ್ರಾಮದ ಐತಿಹಾಸಿಕ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿವರ್ಷ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಕೂಡ ದಸರಾ ಉತ್ಸವ ಆಚರಿಸಲಾಗಿತ್ತು. ಈ ಉತ್ಸವದಲ್ಲಿ ಕೆಂಡ ಹಾಯುವುದು ಇಲ್ಲಿನ ಪದ್ಧತಿ. ಈ ವರ್ಷ ದುರ್ಗಾದೇವಿ ದೇವಸ್ಥಾನದ ಅರ್ಚಕ ಬಸವರಾಜಪ್ಪ ಸ್ವಾಮಿ ಹಸುಗೂಸನ್ನು ಎಡಗೈಲಿ ಎತ್ತಿ ಹಿಡಿದುಕೊಂಡು ಬಿಸಿ ಕೆಂಡದ ಮೇಲೆ ನಡೆದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.ಮಗು ಭಯದಿಂದ ಜೋರಾಗಿ ಅಳುತ್ತಿದ್ದರೂ ಬಿಡದ ಅರ್ಚಕರು ಕೆಂಡ ಹಾಯ್ದಿದ್ದಾರೆ.

- Advertisement -

Latest News

error: Content is protected !!