Tuesday, April 23, 2024
Homeತಾಜಾ ಸುದ್ದಿಲಿಪ್ ಸ್ಟಿಕ್ ಹೋಗುತ್ತೆ ಅಂತಾ ಮಾಸ್ಕ್ ಹಾಕದ ಮದುಮಗಳಿಗೆ ಬಿತ್ತು ದಂಡ

ಲಿಪ್ ಸ್ಟಿಕ್ ಹೋಗುತ್ತೆ ಅಂತಾ ಮಾಸ್ಕ್ ಹಾಕದ ಮದುಮಗಳಿಗೆ ಬಿತ್ತು ದಂಡ

spot_img
- Advertisement -
- Advertisement -

ಬೆಂಗಳೂರು: ಮಾಸ್ಕ್ ಹಾಕದೇ ಡೋಂಟ್ ಕೇರ್ ಅನ್ನುವಂತೆ ನಗರದಲ್ಲಿ ಸಂಚರಿಸೋ ಮಂದಿಗೆ ಬೆಂಗಳೂರಿನಲ್ಲಿ ಮಾರ್ಷ್ ಗಲು ದಂಡ ಹಾಕುತ್ತಿದ್ದಾರೆ. ಅದರಂತೆ ಇಂದು ಬೆಳ್ಳಂಬೆಳಗ್ಗೆ ಸಿರಸಿ ವೃತ್ತದಲ್ಲಿ ಮಾಸ್ಕ್​ ಹಾಕದೇ ತಿರುಗಾಡುತ್ತಿರುವರಿಗೆ ದಂಡ ಹಾಕಿದ್ದಾರೆ. ಈ ವೇಳೆ ಲಿಪ್​ಸ್ಟಿಕ್​ ಹಾಳಾಗುತ್ತದೆ ಎಂದು ಮಾಸ್ಕ್ ಹಾಕದೇ ಬಂದ ಮದುವೆ ಹೆಣ್ಣಿಗೂ ಮಾರ್ಷಲ್ಸ್ ದಂಡ ಹಾಕಿದ್ದಾರೆ.

ಮೇಕಪ್​​​ಗಿಂತ ಮಾಸ್ಕ್ ಮುಖ್ಯ ಈಗ ದಂಡ ಕಟ್ಟಿ. ಸದ್ಯ ಜೀವ ಮುಖ್ಯ ಮೊದಲು ಮಾಸ್ಕ್ ಧರಿಸಿ ಓಡಾಡಿ, ಮುಂದಿನ ದಿನಗಳಲ್ಲಿ ಮೇಕಪ್​ ಮಾಡೋದು ಇದ್ದೇ ಇದೆ ಎಂದು ಬುದ್ಧಿಮಾತು ಹೇಳಿದ್ದಾರೆ. ಕೊನೆಗೆ ಮದುಮಗಳು ಫೈನ್ ಕಟ್ಟಿ ಹೊರಟಿದ್ದಾರೆ. ಮಾಸ್ಕ್​ ಹಾಕದೇ ಸಂಚರಿಸುತ್ತಿದ್ದ ಪೊಲೀಸರಿಗೂ ಮಾರ್ಷಲ್ಸ್ ದಂಡ ಹಾಕಿದ್ದಾರೆ.

ಮಾಸ್ಕ್ ಧರಿಸುವ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಖಡಕ್ ಸೂಚನೆ ನೀಡಿದ್ದು, ತಿನ್ನುವಾಗ, ಕುಡಿಯುವಾಗ, ಸ್ವಿಮ್ಮಿಂಗ್ ಪೂಲ್​​ನಲ್ಲಿದ್ದಾಗ ಮಾತ್ರ ಮಾಸ್ಕ್‌ಗೆ‌ ವಿನಾಯತಿ ನೀಡಲಾಗಿದೆ. ನಾಲ್ಕು ಜನ ನಿಂತು ಮಾತನಾಡುವಾಗ ಮಾಸ್ಕ್‌ ಧರಿಸುವುದು ಕಡ್ಡಾಯ. ಏಕಾಂಗಿಯಾಗಿ ವಾಹನಗಳಲ್ಲಿ ಸಂಚಾರ ಮಾಡಿದ್ರು ಕೂಡ ಮಾಸ್ಕ್ ಧರಿಸಬೇಕು. ಅಲ್ಲದೇ ಮಾಸ್ಕ್​ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ವಾರ್ಡ್​​ವಾರು ಮತ್ತು ವಲಯವಾರು ಸಮಿತಿ ರಚಿಸಲು ಆದೇಶ ಹೊಡಿಸಿದ್ದಾರೆ.

- Advertisement -
spot_img

Latest News

error: Content is protected !!