Thursday, April 25, 2024
Homeತಾಜಾ ಸುದ್ದಿಪಬ್‌ಜಿ ಗೇಮ್ ಆಡಲು ಪೋಷಕರ ವಿರೋಧ- ಮನನೊಂದ ಬಾಲಕ ಆತ್ಮಹತ್ಯೆಗೆ ಶರಣು!..

ಪಬ್‌ಜಿ ಗೇಮ್ ಆಡಲು ಪೋಷಕರ ವಿರೋಧ- ಮನನೊಂದ ಬಾಲಕ ಆತ್ಮಹತ್ಯೆಗೆ ಶರಣು!..

spot_img
- Advertisement -
- Advertisement -

ತಮಿಳುನಾಡು:ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಪಬ್‌ಜಿ ಆಟವನ್ನು ಸ್ಥಗಿತಗೊಳಿಸಿದೆ. ಆದರೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಆನ್ ಲೈನ್ ಪಬ್‌ಜಿ ಗೇಮ್ ಆಡಲು ಪೋಷಕರು ಬಿಡದ ಕಾರಣ 9ನೇ ತರಗತಿಯ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಬ್‌ಜಿ ಚಟ ಹತ್ತಿಸಿಕೊಂಡ ಯುವಕ ತೀವ್ರವಾಗಿ ನೊಂದಿದ್ದ.

ಪಬ್ಜಿ ಚಟ ಬಿಡಿಸಲು ಬಾಲಕನನ್ನು ಕೊಯಮತ್ತೂರಿನ ನರ್ಸಿಂಗ್ ಹೋಂನಲ್ಲಿ ಪಬ್ಜಿ ವ್ಯಸನ ಮುಕ್ತ ಚಿಕಿತ್ಸೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಮಂಗಳವಾರದಂದು ಆತನ ತಂದೆ ತಾಯಿ ಬಂದು ನೋಡಿಕೊಂಡು ಹೋದ ಬಳಿಕ ತನ್ನ ರೂಮಿಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಇತ್ತೀಚಿಗೆ ಪಬ್ಜಿ ಆಟ ಆಡಬೇಕು ಎಂದು ಪೀಡಿಸುತ್ತಿರಲಿಲ್ಲ. ಆದರೆ, ಈ ರೀತಿ ತಪ್ಪು ನಿರ್ಣಯ ಏಕೆ ತೆಗೆದುಕೊಂಡ ಎಂಬುದು ತಿಳಿಯುತ್ತಿಲ್ಲ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!