- Advertisement -
![]()
- Advertisement -
ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ರಾಜ್ಯ ಸರ್ಕಾರದ ಘೋಷಣೆ ಜಾರಿಗೆ ಬಂದಿದೆ.
ಜೂನ್ 12 ರಿಂದಲೇ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ವಿತರಣೆ ಆರಂಭವಾಗಿದ್ದು ನಾಲ್ಕೂ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಹಾಲಿ ಚಾಲ್ತಿಯಲ್ಲಿರುವ ಅರ್ಹತಾ ಮಾನದಂಡ ಮತ್ತು ದೂರದ ಮಿತಿ ನಿಯಮಗಳು ಮುಂದುವರಿಯಲಿವೆ.
ನಿಗಮಗಳ ವ್ಯಾಪ್ತಿಯಲ್ಲಿ ಪಾಸ್ ವಿತರಣಾ ಕೌಂಟರ್ ಗಳನ್ನು ಸ್ಥಾಪನೆ ಮಾಡಲಾಗಿದ್ದು, ಈಗಾಗಲೇ ಹಣ ಪಾವತಿಸಿ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಮುಂದಿನ 15 ದಿನಗಳೊಳಗಾಗಿ ಸಂಪೂರ್ಣ ಹಣ ಮರುಪಾವತಿಯಾಗಲಿದೆ.ಅಲ್ಲದೇ ಪಕ್ಕದ ರಾಜ್ಯಗಳ ಗಡಿಭಾಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ದೊರೆಯಲಿದೆ.
- Advertisement -


