ಮಂಗಳೂರು : ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಮಂಗಳೂರು ವಿಭಾಗದ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ-ಮರೋಳಿ ಹತ್ತಿರ ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಜೂ.11 ರಂದು ಸಂಜೆ 3.30 ಗಂಟೆಗೆ ಮಂಗಳೂರು ಮರೋಳಿ ಬಳಿಯಲ್ಲಿ ಹೋಗಿ ದೃಡಪಡಿಸಿಕೊಂಡು ಆರೋಪಿಗಳು 2 ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಖಚಿತಪಡಿಸಿಕೊಂಡು ತಕ್ಷಣ ದಾಳಿ ಮಾಡಿ 3 ಜನ ಆರೋಪಿಗಳನ್ನು, ಎರಡು ಕಾರು ಮತ್ತು ಆನೆ ದಂತಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.

ಆರೋಪಿಗಳಿಂದ 42.700 ಕಿ.ಗ್ರಾಂ ತೂಕದ 2 ಆನೆದಂತಗಳನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಳ್ಳಲಾಗಿದೆ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನಿವಾಸಿ ಶಶಾಂಕ , ಕಾಸರಗೋಡು ಜಿಲ್ಲೆಯ ಮಂಜೇಶ್ವ ತಾಲೂಕಿನ ನಿವಾಸಿ ಖಾದರ್ ಯಾನೆ ಅಬ್ದುಲ್ ಖಾದರ್, ಮಂಗಳೂರು ಜಿಲ್ಲೆಯ ಅತ್ತಾವರ ,ಜೆಪ್ಪು ನಿವಾಸಿ ಪ್ರಭಾಚಂದ್ರ ರವರನ್ನು ವಶಕ್ಕೆ ಪಡೆದು ಪ್ರಕರಣ ತನಿಖೆಯಲ್ಲಿರುತ್ತದೆ.
ಮಾನ್ಯ ಪೊಲೀಸ್ ಉಪಮಹಾನಿರೀಕ್ಷಕರು, ಸಿ.ಐ.ಡಿ ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್‌ನೆಟ್ಟೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸು ಉಪನಿರೀಕ್ಷಕರಾದ ಶ್ರೀ ದಿಲೀಪ್ ಜಿ ಆರ್ ಹಾಗೂ ಸಿಬ್ಬಂದಿಗಳಾದ ಜಯರಾಮ ಕೆಟಿ, ಬಾಲಕೃಷ್ಣ ಕೆಎಂ, ತಾರನಾಥ ಎಸ್ ಮತ್ತು ಅಬ್ದುಲ್ ರವೂಫ್‌ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


