Saturday, June 13, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಸ್ಐಟಿ ಕಚೇರಿಗೆ ಮಟ್ಟಣ್ಣವರ್ , ಜಯಂತ್ ಟಿ ತಂಡ ಆಗಮನ

ಬೆಳ್ತಂಗಡಿ : ಎಸ್ಐಟಿ ಕಚೇರಿಗೆ ಮಟ್ಟಣ್ಣವರ್ , ಜಯಂತ್ ಟಿ ತಂಡ ಆಗಮನ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣದ ಚಿನ್ನಯ್ಯ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಗಿರೀಶ್ ಮಟ್ಟಣ್ಣವರ್ ,ಜಯಂತ್ ಟಿ ತಂಡ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿ ದೂರು ಅರ್ಜಿ ನೀಡಿದ್ದಾರೆ‌.

ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಜೂನ್.13 ರಂದು ಭೇಟಿ ನೀಡಿ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಪೊಲೀಸ್ ಭದ್ರತೆ ನೀಡಬೇಕು , ಚಿನ್ನಯ್ಯನನ್ನು ಬ್ರೈನ್ ಮ್ಯಾಪಿಂಗ್ ಮಾಡಬೇಕು, ಹೈಕೋರ್ಟ್ ಗೆ ನೀಡಿದ ಹೇಳಿಕೆಯನ್ನು ಮಾಧ್ಯಮಗಳಿಗೆ ,ಸಾಮಾಜಿಕ ಜಾಲತಾಣಗಳಿಗೆ ಕೊಡಬಾರದು ಎಂಬ ಜಾಮೀನು ಷರತ್ತು ಉಲ್ಲಂಘನೆಯಾಗಿರುತ್ತದೆ.ಹೀಗಾಗಿ SIT ತಂಡದ ನ್ಯಾಯವಾದಿಗಳು ಚಿನ್ನಯ್ಯನ ಅವರ ಜಾಮೀನು ರದ್ದತಿ ಅರ್ಜಿ ಸಲ್ಲಿಸಬೇಕು. ಜೊತೆಗೆ ನೇರಪ್ರಸಾರದ ಮೂಲಕ ನನ್ನ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಬೇಕೆಂದು ಮಾಧ್ಯಮಗಳಿಗೆ ಗಿರೀಶ್ ಮಟ್ಟಣ್ಣವರ್ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಜೊತೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಅನಿಲ್ ಅಂತರ, ಪ್ರಕಾಶ್.ಸಿ ಬೆಂಗಳೂರು, ಮನೋಜ್ ಕುಂಜರ್ಪ, ಪ್ರದೀಪ್ ಕುಲಾಲ್, ಗಣೇಶ್ ಶೆಟ್ಟಿ,ಉದಯ ಉಜಿರೆ,ಶ್ರೀನಿವಾಸ್ ಮತ್ತಿತರರು ಜೊತೆಯಲ್ಲಿದ್ದರು.

- Advertisement -

Latest News

error: Content is protected !!