Saturday, June 13, 2026
Homeಕರಾವಳಿಮಂಗಳೂರುಬಂಟ್ವಾಳ: ತಂದೆ-ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಹಣ, ಚಿನ್ನಾಭರಣದೊಂದಿಗೆ ಮಗಳು ಪರಾರಿ

ಬಂಟ್ವಾಳ: ತಂದೆ-ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಹಣ, ಚಿನ್ನಾಭರಣದೊಂದಿಗೆ ಮಗಳು ಪರಾರಿ

- Advertisement -
- Advertisement -

ಬಂಟ್ವಾಳ: ತಂದೆ-ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಹಣ, ಚಿನ್ನಾಭರಣದೊಂದಿಗೆ ಮಗಳು ಪರಾರಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ನಡೆದಿದೆ. ಮಾದೇವಿ (21) ನಾಪತ್ತೆಯಾದ ಯುವತಿ.

ಮಾದೇವಿ ಆರು ತಿಂಗಳ ಕಾಲ ಧಾರವಾಡದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. 5 ತಿಂಗಳುಗಳ ಹಿಂದೆ ಕೆಲಸ ಬಿಟ್ಟು ಬರಿಮಾರುಗೆ ಬಂದಿದ್ದಳು ಎನ್ನಲಾಗಿದೆ.

ಜೂನ್ 11ರಂದು ಬೆಳಿಗ್ಗೆ ಮಾದೇವಿ ತಂದೆ-ತಾಯಿ ಕೆಲಸಕ್ಕೆ ತೆರಳಿದ್ದು, ಸಂಜೆ ಮನೆಗೆ ಮರಳಿದಾಗ ಮಗಳು ಮನೆಯಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬಳಿಕ ಎಲ್ಲೆಡೆ ಹುಡುಕಾಟ ನಡೆಸಿದರೂ ಆಕೆಯ ಸುಳಿವು ಲಭ್ಯವಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇನ್ನು ಯುವಕನೊಬ್ಬನನ್ನು ಮಾದೇವಿ ಪ್ರೀತಿಸುತ್ತಿದ್ದು ಆತನಿಗೆ ಕರೆ ಮಾಡಿದ್ರೆ ಆತನ ಮೊಬೈಲ್ ಸ್ವಿಚ್ಛ್ ಆಫ್ ಬರುತ್ತಿದೆ. ಹಾಗಾಗಿ ಆಕೆ ಆತನೊಂದಿಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮನೆಯಿಂದ ಹೊರಡುವ ವೇಳೆ ಮಾದೇವಿ ಹಣ ಹಾಗೂ ಚಿನ್ನಾಭರಣವನ್ನು ಕೂಡ ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.

- Advertisement -

Latest News

error: Content is protected !!