Sunday, June 14, 2026
Homeತಾಜಾ ಸುದ್ದಿಗುಂಡು ಹಾರಿಸಿ ವಿದ್ಯಾರ್ಥಿನಿಯನ್ನು ಹತ್ಯೆಮಾಡಿದ ಯುವಕ!.. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಯುವತಿಯ ನರಳಾಟ

ಗುಂಡು ಹಾರಿಸಿ ವಿದ್ಯಾರ್ಥಿನಿಯನ್ನು ಹತ್ಯೆಮಾಡಿದ ಯುವಕ!.. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಯುವತಿಯ ನರಳಾಟ

- Advertisement -
- Advertisement -

ಫರಿದಾಬಾದ್‌: ಇಲ್ಲಿನ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯೊಬ್ಬ ನಂತರದಲ್ಲಿ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 21 ವರ್ಷದ ನಿಕಿತಾ ತೋಮರ್‌ ವಾಣಿಜ್ಯ ವಿಭಾಗದಲ್ಲಿ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದು, ಪರೀಕ್ಷೆ ಬರೆಯಲೆಂದು ಬಲ್ಲಾಬ್‌ಗರ್‌ನಲ್ಲಿರುವ ಕಾಲೇಜಿಗೆ ತೆರಳಿದ್ದರು.


ವಿದ್ಯಾರ್ಥಿನಿ ನಿಕಿತಾ ಕಾಲೇಜಿನಿಂದ ಹೊರಬರುವುದನ್ನೇ ಕಾಯುತ್ತಿದ್ದ ತೌಸೀಫ್‌ ಹಾಗೂ ಆತನ ಸ್ನೇಹಿತ ರೆಹಾನ್‌ ಮೊದಲು ಆಕೆಯನ್ನು ಅಪಹರಿಸಲು ಯತ್ನಿಸಿದ್ದಾರೆ.ನಂತರದಲ್ಲಿ ಗನ್‌ ತೋರಿಸಿ ಬೆದರಿಸುವ ವೇಳೆಗೆ ನಿಕಿತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ತೌಸೀಫ್‌ ಗುಂಡು ಹಾರಿಸಿದ್ದಾನೆ.


ಘಟನೆ ನಡೆದ ಬೆನ್ನಲ್ಲೇ ರೆಹಾನ್‌, ತೌಸೀಫ್‌ನನ್ನು ಕಾರಿಗೆ ಹತ್ತಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೇ. ರಸ್ತೆ ಮಧ್ಯದಲ್ಲೇ ರಕ್ತದ ಮಡುವಿನಲ್ಲಿ ನಿಕಿತಾ ನರಳಾಡುತ್ತಿರುವುದು ಹಾಗೂ ಆಕೆಯ ಸ್ನೇಹಿತೆ ಗಾಬರಿಯಿಂದ ಚೀರಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿಕಿತಾ ಹತ್ಯೆ ಬೆನ್ನಲ್ಲೇ ತೌಸೀಫ್‌ನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!