- Advertisement -
![]()
- Advertisement -
ಬರೂಚ್: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜಕೀಯ ತಂತ್ರಗಾರ, ಅಹ್ಮದ್ ಪಟೇಲ್ ಅವರು ನಿನ್ನೆ ನಿಧನರಾಗಿದ್ದು ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರಿನಲ್ಲಿ ನೆರವೇರಿತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗು ಅಪಾರ ಸಂಖ್ಯೆಯಾ ರಾಜಕೀಯ ಧುರೀಣರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರವನ್ನು ಗುಜರಾತಿನ ಬುರೂಜ್ ಜಿಲ್ಲೆಯ ಪಿರಮನ್ ಗ್ರಾಮದ ಮುಸ್ಲಿಂ ಸಮಾಧಿಯಲ್ಲಿ ಮುಸ್ಲಿಂ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ಅಹ್ಮದ್ ಪಟೇಲ್ ಪಾರ್ಥಿವ ಶರೀರವನ್ನು ಅವರ ಹೆತ್ತವರ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಗಿದೆ.
- Advertisement -


