Thursday, June 25, 2026
Homeತಾಜಾ ಸುದ್ದಿಮಂಡ್ಯ : ಗ್ರಾಮ ಆಡಳಿತಾಧಿಕಾರಿಯಿಂದ ವ್ಯಕ್ತಿಯ ಕೊಲೆಯ ಕೊಲೆ ಪ್ರಕರಣ;ಮಯಾಗಿದ್ದ ಆರೋಪಿ ಜಯಚಂದ್ರ ಬಂಧನ

ಮಂಡ್ಯ : ಗ್ರಾಮ ಆಡಳಿತಾಧಿಕಾರಿಯಿಂದ ವ್ಯಕ್ತಿಯ ಕೊಲೆಯ ಕೊಲೆ ಪ್ರಕರಣ;ಮಯಾಗಿದ್ದ ಆರೋಪಿ ಜಯಚಂದ್ರ ಬಂಧನ

- Advertisement -
- Advertisement -

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಶೆಟ್ಟಹಳ್ಳಿಯಲ್ಲಿ ಜೂ.22 ರಂದು ಕ್ಷುಲ್ಲಕ ಕಾರಣಕ್ಕೆ ಗಣೇಶ್ (35) ಎಂಬಾತನ ಮೇಲೆ  ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ  ಗ್ರಾಮಾಡಳಿತಾಧಿಕಾರಿ ಜಯಚಂದ್ರನನ್ನು  ಕೆ. ಎಂ. ದೊಡ್ಡಿ ಪೋಲೀಸರು ಆರೋಪಿಯನ್ನು ಶೆಟ್ಟಿಹಳ್ಳಿಯಲ್ಲಿ ಜೂ. 24 ರಂದು ಮಧ್ಯಾಹ್ನ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದ್ದಂತೆ ಮಹಜರು ಪ್ರಕ್ರಿಯೆ ನಡೆಸಿದ ಪೊಲೀಸರು ಆರೋಪಿ ಜಯಚಂದ್ರನನ್ನು ವಿಚಾರಣೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಮಿಂಜೆ ಗ್ರಾಮ ಆಡಳಿತ ಅಧಿಕಾರಿ ಆಗಿರುವ ಜಯಚಂದ್ರ ಈ ಹಿಂದೆ ಬೆಳ್ತಂಗಡಿ ತಾಲೂಕಿನ ಬಾರ್ಯ, ತೆಕ್ಕಾರು ಗ್ರಾಮದಲ್ಲಿ ವಿ.ಎ.ಆಗಿ ಕರ್ತವ್ಯ ನಿರ್ವಹಿಸಿದ್ದ. ಬೆಳ್ತಂಗಡಿ ಆಡಳಿತ ಸೌಧದದಲ್ಲಿ ಕೇಸ್ ವರ್ಕರ್ ಆಗಿರುವ ವೇಳೆ 94 ಸಿ ಅಕ್ರಮ ಸಕ್ರಮ ದಾಖಲೆಗಳ ಗೋಲ್ ಮಾಲ್ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೂರು ತಿಂಗಳು ಜೈಲಿನಲ್ಲಿದ್ದ ಬಳಿಕ ಪುತ್ತೂರು ತಾಲೂಕಿಗೆ ವರ್ಗಾವಣೆಯಾಗಿದ್ದ.

- Advertisement -

Latest News

error: Content is protected !!