Tuesday, June 9, 2026
Homeತಾಜಾ ಸುದ್ದಿಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟ ಗಾಯಕಿ ವಾಣಿ ಜಯರಾಂ ಸಾವು

ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟ ಗಾಯಕಿ ವಾಣಿ ಜಯರಾಂ ಸಾವು

- Advertisement -
- Advertisement -

ಚೆನ್ನೈ;ನಿನ್ನೆಯಷ್ಟೇ  ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಚೆನ್ನೈನಲ್ಲಿ ವಿಧಿವಶರಾಗಿದ್ದರು. ಇದೀಗ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಹೌದು..77 ವರ್ಷದ ವಾಣಿ ಅವರಿಗೆ ಯಾವುದೇ ಅರೋಗ್ಯ ಸಮಸ್ಯೆ ಇರಲಿಲ್ಲ. ನುಂಗಬಾಕಂನಲ್ಲಿದ್ದ ಅವರ ಮನೆಯಲ್ಲಿ ವಾಣಿ ಅವರು ವಾಸವಾಗಿದ್ದರು. ನಿನ್ನೆ ಅವರು ಹಣೆಗೆ ಪೆಟ್ಟು ಬಿದ್ದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಾಗಾಗಿ ಇದೊಂದು ಸಾವಲ್ಲ ಕೊಲೆ ಎನ್ನುವ ಅನುಮಾನ ಕೂಡ ಮೂಡಿದೆ. ವಾಣಿ ಮನೆಯ ಬಾಗಿಲು ತೆರೆಯದ ಕಾರಣ ಮನೆ ಕೆಲಸದಾಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದು ಬಾಗಿಲು ಒಡೆದಿದ್ದಾರೆ.ಈ ವೇಳೆ ವಾಣಿ ಪ್ರಜ್ಞೆ ತಪ್ಪಿ ಬಿದ್ದಿದ್ದರು.ಆಸ್ಪತ್ರೆಗೆ ಕರೆದುಕೊಂಡುವಷ್ಟರಲ್ಲಿ ವಾಣಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.ಇದರಿಂದಾಗಿ ವಾಣಿ ಸಾವಿನ‌ ಬಗ್ಗೆ ಹಲವು ಸಂಶಯ ಮೂಡಿದೆ.

- Advertisement -

Latest News

error: Content is protected !!