Friday, June 5, 2026
Homeತಾಜಾ ಸುದ್ದಿಫೆ.11 ರೊಳಗೆ ಟ್ರಾಫಿಕ್ ಫೈನ್ ಕಟ್ಟಿದರೆ ಶೇ. 50ರಷ್ಟು ರಿಯಾಯಿತಿ ಘೋಷಣೆ: ದಂಡ ಕಟ್ಟಲು ಮುಗಿ...

ಫೆ.11 ರೊಳಗೆ ಟ್ರಾಫಿಕ್ ಫೈನ್ ಕಟ್ಟಿದರೆ ಶೇ. 50ರಷ್ಟು ರಿಯಾಯಿತಿ ಘೋಷಣೆ: ದಂಡ ಕಟ್ಟಲು ಮುಗಿ ಬಿದ್ದ ಜನ; ಎರಡೇ ದಿನಗಳಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?

- Advertisement -
- Advertisement -

ಬೆಂಗಳೂರು : ರಾಜ್ಯ ಸರ್ಕಾರ ಫೆ.11 ರೊಳಗೆ ಟ್ರಾಫಿಕ್ ಫೈನ್ ಕಟ್ಟಿದರೆ ಶೇ. 50 ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದೆ. ಹೀಗಾಗಿ ದಂಡ ಕಟ್ಟಲು ವಾಹನ ಸವಾರರು ಮುಗಿ ಬೀಳುತ್ತಿದ್ದಾರೆ.

ಅದರಂತೆ ಕೇವಲ ಎರಡೇ ದಿನದಲ್ಲಿ 14 ಕೋಟಿ ದಂಡ ಪಾವತಿಸಿದ್ದಾರೆ.ಇಲ್ಲಿಯವರೆಗೆ 30 ಲಕ್ಷ ಕೇಸ್ ಕ್ಲಿಯರ್ ಮಾಡಿಕೊಂಡಿದ್ದಾರೆ.

ಈ ಆದೇಶವು ಫೆ 11ರೊಳಗೆ ಟ್ರಾಫಿಕ್ ಫೈನ್ ಕಟ್ಟುವವರಿಗೆ ಮಾತ್ರ ಅನ್ವಯವಾಗಲಿದೆ. ಇದು ಸೀಮತ ಅವಧಿಯಲ್ಲಿ ನಡೆಯಲಿದೆ. ಈ ಮೂಲಕ ನಿಗದಿತ ದಿನಾಂಕದೊಳಗೆ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿ ದಂಡವನ್ನು ಪಾವತಿ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿರುವವರು ಮುಂದಿನ ಕಾನೂನಿನ ಕುಣಿಕೆಯಿಂದ ಬಚಾವ್ ಆಗಲು ಇದು ಸುವರ್ಣ ಅವಕಾಶವನ್ನು ನೀಡಿದೆ.

ಫೆ 11ರಂದು ಲೋಕ ಅದಾಲತ್ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಮಾಡಿದೆ.ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಜೊತೆಗೆ ಕಾನೂನು ಪ್ರಾಧಿಕಾರ ಉತ್ತಮ ಹೆಜ್ಜೆ ಇಟ್ಟಿದೆ.

- Advertisement -

Latest News

error: Content is protected !!