Saturday, June 6, 2026
Homeತಾಜಾ ಸುದ್ದಿಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಸಜ್ಜಾದ ಶ್ರೀರಾಮಸೇನೆ

ಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಸಜ್ಜಾದ ಶ್ರೀರಾಮಸೇನೆ

- Advertisement -
- Advertisement -

ಧಾರವಾಡ: ಮಸೀದಿಗಳಿಗೆ ಸುಪ್ರೀಂಕೋಟ್ ನೀಡಿದ ಗಡುವು ಮುಗಿದಿದ್ದು, ಸುಪ್ರೀಂಕೋರ್ಟ್ ಆದೇಶದನ್ವಯ ಮೈಕ್ ತೆರವು ವಿಳಂಬವಾಗಿರೋದ್ರಿಂದ ರಾಜ್ಯದಲ್ಲಿ ಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಶ್ರೀರಾಮಸೇನೆ ಸಜ್ಜಾಗಿದೆ. ಇವತ್ತು ಬಿಜೆಪಿ ಮುಖಂಡರ ಮನೆ ಮುಂದೆ ಪ್ರತಿಭಟನೆ ಆಯೋಜಿಸಲಾಗಿದೆ.

ಶ್ರೀರಾಮಸೇನೆಯು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿಗೆ ಕರೆ ಕೊಟ್ಟಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಗೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ಕೊಟ್ಟಿವೆ.

ಸೋಷಿಯಲ್ ಮೀಡಿಯಾ ಮೂಲಕ ಧರಣಿಯಲ್ಲಿ ಭಾಗವಹಿಸುವಂತೆ ಈಗಾಗಲೇ ಶ್ರೀರಾಮಸೇನೆಯ ಸದಸ್ಯರಿಗೆ, ಪದಾಧಿಕಾರಿಗಳಿಗೆ, ಹಿಂದೂಪರ ಸಂಘಟನೆ ಮತ್ತು ಹಿಂದೂಗಳಿಗೆ ಸಂದೇಶ ರವಾನಿಸಲಾಗಿದೆ. ಈ ಕುರಿತು ಜೂನ್ 2ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುತಾಲಿಕ್ ಮಾಹಿತಿ ಕೊಟ್ಟಿದ್ದರು. ಜೂನ್ 8ರಂದು ಬಿಜೆಪಿ ಎಂಎಲ್‍ಎಗಳ ಕಚೇರಿ ಮುಂದೆ ಧರಣಿ ಕೂರುವ ಬಗ್ಗೆ ಎಚ್ಚರಿಸಿದ್ದರು.

- Advertisement -

Latest News

error: Content is protected !!