Sunday, June 7, 2026
Homeತಾಜಾ ಸುದ್ದಿಬಂಟ್ವಾಳ: ರಿಕ್ಷಾ ಟೆಂಪೋದಲ್ಲಿ ಸಿಮೆಂಟ್‌ ಲೋಡ್‌ ಮಾಡ್ತಿದ್ದ ವೇಳೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡ ರಿಕ್ಷಾ...

ಬಂಟ್ವಾಳ: ರಿಕ್ಷಾ ಟೆಂಪೋದಲ್ಲಿ ಸಿಮೆಂಟ್‌ ಲೋಡ್‌ ಮಾಡ್ತಿದ್ದ ವೇಳೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸಾವು

- Advertisement -
- Advertisement -

ಬಂಟ್ವಾಳ: ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಂಟ್ವಾಳದ ಕಲ್ಲಡ್ಕ ಪೂರ್ಲಿಪ್ಪಾಡಿಯಲ್ಲಿ ನಡೆದಿದೆ.

ನೌಶಾದ್ ಸುರಿಬೈಲು (28) ಮೃತಪಟ್ಟ ದುರ್ದೈವಿ. ಕೆ.ಎನ್ ಬೇಕರಿ ಬಳಿಯ ರಸ್ತೆಯ ಬದಿಯಲ್ಲಿ ರಿಕ್ಷಾ ಟೆಂಪೋ ನಿಲ್ಲಿಸಿ ಸಿಮೆಂಟ್ ಸೀಟು ಲೋಡು ಮಾಡುವ ಸಮಯದಲ್ಲಿ ಕಾರೊಂದು ಹಿಂಬದಿಯಿಂದ ಬಂದು ನೌಶಾದ್ ಅವರಿಗೆ ಡಿಕ್ಕಿ ಹೊಡೆದಿತ್ತು . ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ನೌಶಾದ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನೌಶಾದ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

- Advertisement -

Latest News

error: Content is protected !!