Sunday, June 7, 2026
Homeತಾಜಾ ಸುದ್ದಿಅಮಿತ್ ಶಾಗೆ ಪಾದರಕ್ಷೆ ತಂದುಕೊಟ್ಟ ತೆಲಂಗಾಣ ಬಿಜೆಪಿ ಅಧ್ಯಕ್ಷ: ಬಿಜೆಪಿ ವಿರುದ್ಧ ಟಿಆರ್‌ಎಸ್ ತೀವ್ರ ವಾಗ್ದಾಳಿ

ಅಮಿತ್ ಶಾಗೆ ಪಾದರಕ್ಷೆ ತಂದುಕೊಟ್ಟ ತೆಲಂಗಾಣ ಬಿಜೆಪಿ ಅಧ್ಯಕ್ಷ: ಬಿಜೆಪಿ ವಿರುದ್ಧ ಟಿಆರ್‌ಎಸ್ ತೀವ್ರ ವಾಗ್ದಾಳಿ

- Advertisement -
- Advertisement -

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಶೂಗಳನ್ನು ತಂದುಕೊಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮಿತ್ ಶಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅವರ ಚಪ್ಪಲಿಯನ್ನು ತರುತ್ತಿರುವ ವೈರಲ್ ವಿಡಿಯೋ ಕುರಿತು ಟಿಆರ್‌ಎಸ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್, ದೆಹಲಿಯ ಚಪ್ಪಲಿಗಳನ್ನು ಹೊರುವ ಗುಜರಾತಿ ಗುಲಾಮರನ್ನು ತೆಲಂಗಾಣ ಗಮನಿಸುತ್ತಿದೆ. ತೆಲಂಗಾಣದ ಸ್ವಾಭಿಮಾನ ಕೆಣಕುವ ಯಾವುದೇ ಪ್ರಯತ್ನವನ್ನು ಹಿಮೆಟ್ಟಿಸುತ್ತೇವೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!