Thursday, June 4, 2026
Homeತಾಜಾ ಸುದ್ದಿಶಾಲೆಗೆ ಲಂಚ್ ಬಾಕ್ಸ್ ಗೆ ಗೋಮಾಂಸದ ಖಾದ್ಯ ತಂದ ಶಿಕ್ಷಕಿ ಬಂಧನ

ಶಾಲೆಗೆ ಲಂಚ್ ಬಾಕ್ಸ್ ಗೆ ಗೋಮಾಂಸದ ಖಾದ್ಯ ತಂದ ಶಿಕ್ಷಕಿ ಬಂಧನ

- Advertisement -
- Advertisement -

ಅಸ್ಸಾಂ: ಶಾಲೆಗೆ ಮಧ್ಯಾಹ್ನದ ಊಟಕ್ಕೆ ಬೇಯಿಸಿದ ಗೋಮಾಂಸ ಭಕ್ಷ್ಯ  ತಂದಿದ್ದಕ್ಕಾಗಿ ಅಸ್ಸಾಂನ ಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಅರೆಸ್ಟ್ ಮಾಡಲಾಗಿದೆ.

ಲಖಿಪುರ ಪ್ರದೇಶದ ಹುರ್ಕಾಚುಂಗಿ ಮಿಡಲ್ ಇಂಗ್ಲಿಷ್ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷರು ಮಧ್ಯಾಹ್ನದ ಊಟಕ್ಕೆ ಗೋಮಾಂಸವನ್ನು ತಂದಿದ್ದಾರೆ ಎಂದು ಆರೋಪಿಸಿ ಮುಖ್ಯೋಪಾಧ್ಯಾಯಿನಿ ವಿರುದ್ಧ ದೂರು ದಾಖಲಿಸಿದ್ದರು.

ಶಿಕ್ಷಕಿಯನ್ನು ಮೇ 16 ರಂದು ಪೊಲೀಸ್ ಠಾಣೆಗೆ ಕರೆತಂದಿದ್ದೇವೆ. ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯವು ಮರುದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಲಾಗಿದೆ  ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೃಣಾಲ್ ದೇಕಾ ಅವರು ತಿಳಿಸಿದ್ದಾರೆ.

ಮುಖ್ಯೋಪಾಧ್ಯಾಯಿನಿ ವಿರುದ್ಧ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಪ್ರಕರಣವನ್ನು ದಾಖಲಿಸಲಾಗಿದೆ.

- Advertisement -

Latest News

error: Content is protected !!