Monday, May 6, 2024
Homeತಾಜಾ ಸುದ್ದಿBIG BREAKING: ಖ್ಯಾತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣು

BIG BREAKING: ಖ್ಯಾತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣು

spot_img
- Advertisement -
- Advertisement -

ಖ್ಯಾತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಚಾರ ಇಡೀ ಬಾಲಿವುಡ್‌ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ.

ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಮಹೇಂದ್ರ ಸಿಂಗ್‌ ಧೋನಿಯವರ ಜೀವಾನಾಧರಿತ ಚಿತ್ರದಲ್ಲಿ ನಟಿಸಿದ್ದ, ಸುಶಾಂತ್‌ ಸಿಂಗ್‌ ರಜಪೂತ್‌ ಹಲವಾರು ಬಾಲಿವುಡ್‌ ಚಿತ್ರಗಳಲ್ಲೂ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಬಿಹಾರದ ಪಾಟ್ನಾದಲ್ಲಿ 1986 ರ ಜನವರಿ 21 ರಂದು ಜನಿಸಿದ್ದು, ಕೇವಲ 34 ನೇ ವಯಸ್ಸಿಗೇ ಇಹಲೋಕ ತ್ಯಜಿಸಿರುವುದು ದಿಗ್ಬ್ರಮೆಯನ್ನುಂಟು ಮಾಡಿದೆ.

ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ರೂಮಿನಲ್ಲಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಲಾಕ್ಡೌನ್ ನಿಂದಾಗಿ ಯಾವುದೇ ಹೊಸ ಪ್ರಾಜೆಕ್ಟ್ ಸಿಗದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ದಿಶಾ ಸಾಲಿಯಾನ್

ಕೆಲದಿನಗಳ ಹಿಂದೆ ಮಹಿಳಾ ಮ್ಯಾನೇಜರ್ ಆತ್ಮಹತ್ಯೆ

ಇತ್ತೀಚೆಗಷ್ಟೇ (ಜೂನ್ 9) ಸುಶಾಂತ್ ಸಿಂಗ್ ಮ್ಯಾನೇಜರ್, ಕರಾವಳಿ ಮೂಲದ​ ದಿಶಾ ಸಾಲಿಯಾನ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಬೈ ನ ಮಲಾಡ್ ನಲ್ಲಿ ದಿಶಾ ವಾಸವಿದ್ದ ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು.

- Advertisement -
spot_img

Latest News

error: Content is protected !!