Sunday, June 7, 2026
Homeತಾಜಾ ಸುದ್ದಿಉಡುಪಿ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ಮಾಡುತ್ತಿದೆ:ಬೆಂಗಳೂರಿನಲ್ಲಿ ಕಾರ್ಕಳ‌  ಶಾಸಕ ಸುನೀಲ್ ಕುಮಾರ್ ಹೇಳಿಕೆ

ಉಡುಪಿ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ಮಾಡುತ್ತಿದೆ:ಬೆಂಗಳೂರಿನಲ್ಲಿ ಕಾರ್ಕಳ‌  ಶಾಸಕ ಸುನೀಲ್ ಕುಮಾರ್ ಹೇಳಿಕೆ

- Advertisement -
- Advertisement -

ಬೆಂಗಳೂರು; ಉಡುಪಿ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಕಾರ್ಕಳ‌  ಶಾಸಕ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.ಮುಸ್ಲಿಂ ಹುಡುಗಿಯರು ಇದ್ದಾರೆ ಎನ್ನುವ ಕಾರಣಕ್ಕೆ ಹೀಗೆ ಮಾಡ್ತಾ ಇದ್ದಾರೆ.ಹಿಜಾಬ್ ಘಟನೆ ಆದಾಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದವರು ಸುಪ್ರೀಂ ತನಕ ಹೋಗ್ತಾರೆ ಎಂದರೆ ಅದರ ಹಿಂದೆ ಎಷ್ಟು ದೊಡ್ಡ ಷಡ್ಯಂತ್ರ ಮತ್ತು ಶಕ್ತಿ ಕೆಲಸ ಮಾಡಿದೆ ಎಂದಿದ್ದಾರೆ.

ಶೌಚಾಲಯದಲ್ಲಿ ವೀಡಿಯೋ ಮಾಡ್ತಾ ಇದ್ದಾರೆ ಎಂದರೆ ಇದರ ಹಿಂದೆ ಪಿತೂರಿ ಇದೆ. ದೊಡ್ಡ ಕೈವಾಡ ಇದೆ.ವೀಡಿಯೋ ಬಳಿಕ ಮೊಬೈಲ್ ಬದಲಾವಣೆ ಮಾಡಿದ್ದಾರೆ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಆರೋಪ ಮಾಡಿದ್ದಾರೆ.ಮುಸ್ಲಿಂ ಹೆಣ್ಣುಮಕ್ಕಳು ಕೂಡ ಜಿಹಾದ್ ಕಡೆ ವಾಲಿದ್ದಾರೆ ಎನ್ನುವುದೇ ಆತಂಕದ ವಿಷಯ ಎಂದು ಹೇಳಿದ್ದಾರೆ.

ಹಿಂದೂ ಹೆಣ್ಣುಮಕ್ಕಳು ಶಾಲೆಗೆ ಬರುವುದಕ್ಕೂ ಭಯ ಪಡುವ ಸ್ಥಿತಿ ನಿರ್ಮಾಣ ಆಗಿದೆ.ಬೆಂಕಿ ಹಚ್ಚಿದವರು ಅಮಾಯಕರ ತರ ಈ ಸರ್ಕಾರಕ್ಕೆ ಕಾಣುತ್ತದೆ. ವೀಡಿಯೋ ಮಾಡಿದ್ದು ತಮಾಷೆಗೆ ಎನ್ನುತ್ತಾರೆ.ವೀಡಿಯೋ ಪ್ರಕರಣ ಬೆಳಕಿಗೆ ತಂದವರ ಮನೆಗೆ ರಾತ್ರೋ ರಾತ್ರಿ ಹೋಗ್ತಾರೆ.ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣಕ್ಕೆ ಸರ್ಕಾರ ಮೌನ ಆಗುತ್ತದೆ ಎಂದರೆ ಇವರ ಮನಸ್ಥಿತಿ ಹೇಗೆ ಅನ್ನೋದು ಗೊತ್ತಾಗುತ್ತದೆ ಎಂದರು.

- Advertisement -

Latest News

error: Content is protected !!