Friday, June 5, 2026
Homeತಾಜಾ ಸುದ್ದಿಖ್ಯಾತ ನಿರೂಪಕಿ, ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ದಾಂಪತ್ಯದಲ್ಲಿ ಬಿರುಕು; ಪತಿ ಸತ್ಯ ನಾಯ್ಡುಗೆ...

ಖ್ಯಾತ ನಿರೂಪಕಿ, ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ದಾಂಪತ್ಯದಲ್ಲಿ ಬಿರುಕು; ಪತಿ ಸತ್ಯ ನಾಯ್ಡುಗೆ ಡಿವೋರ್ಸ್ ನೀಡಿದ ಚೈತ್ರಾ

- Advertisement -
- Advertisement -

ಬೆಂಗಳೂರು : ಖ್ಯಾತ ನಿರೂಪಕಿ, ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತಿ ಸತ್ಯ ನಾಯ್ಡುಗೆ ಡಿವೋರ್ಸ್ ನೀಡಿದ್ದಾರೆ.


ಈ  ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ  ಚೈತ್ರಾ ಪೋಸ್ಟ್​ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ.

ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದಾರೆ. 

 ಸತ್ಯನಾಯ್ಡು ಈವೆಂಟ್​ ಮ್ಯಾನೇಜ್​ಮೆಂಟ್​ ನಡೆಸುತ್ತಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಚೈತ್ರಾ ನೋಡಿ ಮೆಚ್ಚಿದ್ದರು. ಚೈತ್ರಾ-ಸತ್ಯನಾಯ್ಡು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ದಂಪತಿ ಇದೀಗ ಐದು ವರ್ಷಗಳ ಬಳಿಕ ಪರಸ್ಪರ. ಚೈತ್ರಾ ದಕ್ಷಿಣ ಭಾರತದ ಫೇಮಸ್​ ವಿಡಿಯೋ ಜಾಕಿಯೂ ಆಗಿ, ಈವೆಂಟ್ಸ್​ ಫ್ಯಾಕ್ಟರಿ ಎಂಡಿಯಾಗಿದ್ದರು. ಅಷ್ಟೇ ಅಲ್ಲದೇ ಬಿಗ್​​ ಬಾಸ್ ಸೀಸನ್​ 7ನಲ್ಲಿ ಸ್ಪರ್ಧಿಯಾಗಿದ್ದರು.

- Advertisement -

Latest News

error: Content is protected !!