- Advertisement -
![]()
- Advertisement -
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರದಂದು ಕಂಪ್ಲೀಟ್ ಲಾಕ್ ಡೌನ್ ಘೋಷಿಸಿದ್ದು, ಆದರೆ ಇಂದು ದಿಢೀರ್ ತೀರ್ಮಾನ ಕೈಗೊಂಡು ನಾಳಿನ ಕಂಪ್ಲೀಟ್ ಲಾಕ್ ಡೌನ್ ಕೈ ಬಿಡಲಾಗಿದೆ.
ಬಸ್, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲ ಸೇವೆಗಳೂ ಈ ಹಿಂದಿನಂತೆ ಮುಂದುವರಿಯಲಿವೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಾರ್ವಜನರಿಕರಿಂದ ಈ ರೀತಿಯ ಬೇಡಿಕೆಗಳು ಕಂಡು ಬಂದ ಹಿನ್ನಲೆಯಲ್ಲಿ ನಾಳೆ ಲಾಕ್ ಡೌನ್ ಇರುವುದಿಲ್ಲ. ರಾತ್ರಿ ಏಳು ಗಂಟೆಯಿಂದ ಬೆಳಿಗ್ಗೆ ಏಳು ಗಂಟೆಯವರೆಗಿನ ಕರ್ಫ್ಯೂ ಮಾತ್ರ ಮುಂದುವರಿಯಲಿದೆ ಎಂದಿದ್ದಾರೆ.
ಈ ಆದೇಶವು ಮೇ 31ಕ್ಕೆ ಮಾತ್ರ ಸೀಮಿತವಾಗಿದ್ದು, ನಂತರದ ನಿರ್ಧಾರವನ್ನು ಕೇಂದ್ರ ಸರ್ಕಾರ ಮುಂದಿನ ಮಾರ್ಗಸೂಚಿಯ ನಂತರ ಕೈಗೊಳ್ಳಬಹುದಾದದ ಸಾಧ್ಯತೆಯಿದೆ.
- Advertisement -


