Thursday, June 4, 2026
Homeಮನರಂಜನೆಕೆಜಿಎಫ್-2ಗೆ ಭರ್ಜರಿ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಖ್ಯಾತ ನಟಿ ಈಶ್ವರಿ ರಾವ್

ಕೆಜಿಎಫ್-2ಗೆ ಭರ್ಜರಿ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಖ್ಯಾತ ನಟಿ ಈಶ್ವರಿ ರಾವ್

- Advertisement -
- Advertisement -

ತೆಲುಗಿನಲ್ಲಿ ‘ಬಾಹುಬಲಿ’ ಸಿನಿಮಾ ರೀತಿಯೇ ಕನ್ನಡದಲ್ಲಿ ‘ಕೆಜಿಎಫ್‌’ ಚಿತ್ರ ಕೂಡ ಕಥೆ ವಿಚಾರದಲ್ಲಿ ವಿಶೇಷ ಎನಿಸಿಕೊಂಡಿದೆ. ಅಂದರೆ, ಈ ಎರಡೂ ಸಿನಿಮಾಗಳು ಅರ್ಧ ಕಥೆಯನ್ನು ಪಾರ್ಟ್‌ 1ರಲ್ಲಿ ಹೇಳಿ, ಇನ್ನರ್ಧ ಕಥೆಯನ್ನು 2ನೇ ಪಾರ್ಟ್‌ನಲ್ಲಿ ಹೇಳುವ ತಂತ್ರ ಬಳಸಿಕೊಂಡಿವೆ. ಈಗಾಗಲೇ ‘ಕೆಜಿಎಫ್‌: ಚಾಪ್ಟರ್‌ 1’ ನೋಡಿ ಇಷ್ಟಪಟ್ಟಿರುವವರು ‘ಚಾಪ್ಟರ್‌ 2’ಗಾಗಿ ಕಾದಿದ್ದಾರೆ.

ಕೆಜಿಎಫ್-2 ಚಿತ್ರ ತನ್ನ ತಾರಾಗಣದ ಮೂಲಕ ಸಖತ್ ಸದ್ದು ಮಾಡುತ್ತಿರುವ ಚಿತ್ರ. ಇಡೀ ಭಾರತ ಚಿತ್ರರಸಿಕರೇ ರಾಕಿಭಾಯ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ವೇಳೆ ದಕ್ಷಿಣ ಭಾರತದ ಹಿರಿಯ ನಟಿ ಈಶ್ವರಿ ರಾವ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಹೌದು ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಾಲಿಯಾಳಂ ಸೇರಿದಂತೆ ಕನ್ನಡದಲ್ಲೂ ನಟನೇ ಮಾಡಿರುವ ಈಶ್ವರಿ ರಾವ್, ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಿರುವು ಕೊಡುವ ಒಂದು ಪಾತ್ರದಲ್ಲಿ ಈಶ್ವರಿಯವರು ನಟಿಸಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಈಶ್ವರಿಯವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ದಕ್ಷಿಣ ಭಾರತದಲ್ಲೇ ಖ್ಯಾತ ನಟಿಯಾಗಿರುವ ಈಶ್ವರಿ ರಾವ್, ಪಂಚಭಾಷಾ ತಾರೆ ಕೆಲ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. 90ರ ದಶಕದಲ್ಲಿ ರಜನಿಕಾಂತ್, ಕಮಲ್ ಹಾಸನ್ ನಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ಒಳ್ಳೆಯ ನಟಿ. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅವರ ‘ಕಾಲ’ ಸಿನಿಮಾದಲ್ಲೂ ಈಶ್ವರಿಯವರು ನಟಿಸಿದ್ದಾರೆ. ಜೊತೆಗೆ 1995ರಲ್ಲಿ ಎಸ್ ನಾರಾಯಣ್ ನಿರ್ದೇಶನ ‘ಮೇಘ ಮಾಲೆ’ ಎಂಬ ಕನ್ನಡ ಸಿನಿಮಾದಲ್ಲೂ ಈಶ್ವರಿಯವರು ಅಭಿನಯಿಸಿದ್ದಾರೆ.

- Advertisement -

Latest News

error: Content is protected !!