Thursday, June 4, 2026
Homeತಾಜಾ ಸುದ್ದಿ1 ವರ್ಷದ ಸಂಭ್ರಮದಲ್ಲಿ ಮೋದಿ 2.0 ಸರ್ಕಾರ, ಬಿಜೆಪಿಯಿಂದ ಭರ್ಜರಿ ತಯಾರಿ

1 ವರ್ಷದ ಸಂಭ್ರಮದಲ್ಲಿ ಮೋದಿ 2.0 ಸರ್ಕಾರ, ಬಿಜೆಪಿಯಿಂದ ಭರ್ಜರಿ ತಯಾರಿ

- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಮೊದಲ ವರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ 1 ವರ್ಷ ಅವಧಿಯಲ್ಲಿ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ ಮಾಡಿದ್ದಾರೆ.

ಇವತ್ತು ಶನಿವಾರ ಇಡೀ ರಾಷ್ಟ್ರವನ್ನುದ್ದೇಶಿಸಿ ಅವರು ಪತ್ರ ಬರೆದು ತಮ್ಮ ಆಡಳಿತದ ಸಾಧನೆಯನ್ನು ಹೇಳಿಕೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಆರ್ಟಿಕಲ್ ಅನ್ನು ತೆಗೆದುಹಾಕಿದ್ದು, ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತಂದಿದ್ದು, ರಾಮ ಮಂದಿರ ಸಮಸ್ಯೆ ಇತ್ಯರ್ಥಪಡಿಸಿದ್ದು ಇವು ಒಂದು ವರ್ಷದ ಅವಧಿಯಲ್ಲಿ ತಮ್ಮ ಸರ್ಕಾರದ ಪ್ರಮುಖ ಸಾಧನೆಗಳೆಂದು ಪ್ರಧಾನಿ ಹೇಳಿದ್ಧಾರೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅದ್ದೂರಿ ಸಂಭ್ರಮಾಚರಣೆ ಬದಲಿಗೆ ಜೂನ್ ತಿಂಗಳಿಡಿ ದೇಶಾದ್ಯಂತ 500 ಡಿಜಿಟಲ್ ರ್ಯಾಲಿ ಮತ್ತು 1000 ವಿಡಿಯೋ ಸಂವಾದಗಳನ್ನು ನಡೆಸಲು ಬಿಜೆಪಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

- Advertisement -

Latest News

error: Content is protected !!