Saturday, June 6, 2026
Homeತಾಜಾ ಸುದ್ದಿತುಮಕೂರಿನಲ್ಲಿ ನಡೆದ ಅಪಘಾತದಲ್ಲಿ ಸುಳ್ಯದ ಯುವಕ ಸಾವು

ತುಮಕೂರಿನಲ್ಲಿ ನಡೆದ ಅಪಘಾತದಲ್ಲಿ ಸುಳ್ಯದ ಯುವಕ ಸಾವು

- Advertisement -
- Advertisement -

ತುಮಕೂರು; ಇಲ್ಲಿನ ಪಾವಗಡದಲ್ಲಿ ನಡೆದ ಅಪಘಾತದಲ್ಲಿ ಸುಳ್ಯದ ಯುವಕ ಒಬ್ಬರು ಸಾವನ್ನಪ್ಪಿದ್ದಾರೆ. ಸುಳ್ಯ ಕೇರ್ಪಳ ಮೂಲದ ಪ್ರಜ್ವಲ್ ಮೃತ ಯುವಕ.

ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಪಾವಗಡದಲ್ಲಿ ಟೋಲ್‌ ಸುಪರ್‌ವೈಸ‌ರ್ ಆಗಿ ಕೆಲಸದಲ್ಲಿದ್ದರು.ನಿನ್ನೆ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ತಲೆ ರಸ್ತೆಗೆ ಬಡಿಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಪ್ರಜ್ವಲ್ ತಂದೆ, ತಾಯಿ, ಹಾಗೂ ಸಹೋದರಿಯನ್ನು ಅಗಲಿದ್ದು, ಮನೆಗೆ ಆಧಾರವಾಗಿದ್ದ‌ ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಹೇಳ ತೀರದಾಗಿದೆ..

- Advertisement -

Latest News

error: Content is protected !!